Wednesday, February 28, 2024

CRICKET | ಡಕ್​ ಔಟ್ ಆದರೂ ಟಿ20ಯಲ್ಲಿ ಹೊಸ ದಾಖಲೆ ಬರೆದ ರೋಹಿತ್​ ಶರ್ಮಾ

ಹೊಸದಿಂಗತ ಡಿಜಿಟಲ್ ಡೆಸ್ಕ್:

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿರುವ ಹೊರತಾಗಿಯೂ ವಿಶೇಷ ದಾಖಲೆಯೊಂದನ್ನು ಮಾಡಿದ್ದಾರೆ.

100 ಪಂದ್ಯಗಳ ಗೆಲುವಿನ ಸರದಾರ ಎನಿಸಿಕೊಂಡಿರುವ ರೋಹಿತ್. ಸುಮಾರು ಒಂದೂವರೆ ವರ್ಷದ ಬಳಿಕ ಟಿ20 ಮಾದರಿಗೆ ಆಗಮಿಸಿರುವ ಅವರು ಅನಗತ್ಯ ರನ್ ​ಔಟ್​ಗೆ ಒಳಗಾಗಿದ್ದರೂ ದಾಖಲೆಯನ್ನು ಮುಂದುವರಿಸಿದ್ದಾರೆ.

ಭಾರತದ ಆರಂಭಿಕ ಬ್ಯಾಟರ್​ ರೋಹಿತ್​​ 2 ಎಸೆತಗಳಲ್ಲಿ ಡಕ್ ಔಟ್ ಆದ ಹೊರತಾಗಿಯೂ, ಪುರುಷರ ಟಿ20 ಐನಲ್ಲಿ 100 ಗೆಲುವಿನ ಭಾಗವಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಪುರುಷರ ಟಿ20 ಐನಲ್ಲಿ 100ನೇ ಗೆಲುವಿನ ಮೈಲಿಗಲ್ಲನ್ನು ತಲುಪಿದ ಮೊದಲ ಆಟಗಾರ ಹಾಗೂ ನಾಲ್ಕನೇ ಕ್ರಿಕೆಟರ್​ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ ರೋಹಿತ್ ಶರ್ಮಾ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!