CRICKET | ಕೊನೆಗೂ ​ಕ್ರಿಕೆಟ್​ ಅಭ್ಯಾಸ ಆರಂಭಿಸಿದ ಇಶಾನ್​ ಕಿಶನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಟೆಸ್ಟ್‌ ತಂಡದ ಭಾಗವಾಗಿದ್ದ ಇಶಾನ್‌ ಕಿಶನ್‌ ವೈಯಕ್ತಿಕ ಸಮಸ್ಯೆಯಿಂದಾಗಿ ಸರಣಿ ಆರಂಭವಾದ ಕೆಲವೇ ದಿನಗಳಲ್ಲಿ ಸರಣಿಯಿಂದ ಹಿಂದೆ ಸರಿದಿದ್ದರು.

ಪರಿಶೀಲನಾ ಮಂಡಳಿ ಮತ್ತು ಕೋಚ್‌ನ ಕೆಲವು ಸೂಚನೆಗಳನ್ನು ಅನುಸರಿಸಲು ವಿಫಲವಾದ ಕಾರಣ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ನಂತರ ವರದಿಯಾಗಿತ್ತು. ಇಶಾನ್ ಪ್ರಸ್ತುತ ಬರೋಡಾದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಅವರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ರಜೆಯಲ್ಲಿ ಇದ್ದ ಇಶಾನ್ ಭಾರತಕ್ಕೆ ಬರುವ ಬದಲು, ದುಬೈನಲ್ಲಿ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದರು. ರಾಹುಲ್ ದ್ರಾವಿಡ್ ನಂತರ ರಣಜಿ ಆಡಲು ಇಶಾನ್ ಅವರಿಗೆ ಸೂಚಿಸಿದ್ದರು. ಆದರೆ ಇಶಾನ್ ಇದನ್ನು ನಿರ್ಲಕ್ಷಿಸಿದ್ದರು. ಇದರ ಪರಿಣಾಮವಾಗಿ, ಶಿಸ್ತಿನ ಉಲ್ಲಂಘನೆಯಿಂದಾಗಿ ಅವರನ್ನು ತಂಡದಿಂದ ತೆಗೆದುಹಾಕಲಾಗಿತ್ತು. ಇದೀಗ ಮತ್ತೆ ಇಶಾನ್ ಬರೋಡಾದಲ್ಲಿ ಕ್ರಿಕೆಟ್ ತರಬೇತಿ ಆರಂಭಿಸಿದ್ದಾರೆ ಎನ್ನಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!