ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ಕಡೆ ಈ ಸಂದರ್ಭದಲ್ಲಿ ಭಾರಿ ಹಿಮಪಾತ ಸೃಷ್ಟಿಯಾಗುತ್ತದೆ. ಅಲ್ಲಿನ ಹಲವು ರಸ್ತೆಗಳು ಸಂಪೂರ್ಣ ಹಿಮದಿಂದ ಮುಚ್ಚಿರುತ್ತದೆ. ಅಂತಹ ಸಮಯದಲ್ಲಿ ಅಲ್ಲಿನ ಸ್ಥಳೀಯ ನಿವಾಸಿಗಳು ಹಾಗೂ ಪ್ರವಾಸಿಗರಿಗೆ ತೊಂದರೆ ಉಂಟುಮಾಡುತ್ತದೆ.
ಉತ್ತರಾಖಂಡ ರಾಜ್ಯದಲ್ಲಿ ಅತೀ ಹೆಚ್ಚು ಹಿಮಪಾತವಾಗುವ ಕಣಿವೆಯೆಂದರೆ ಅದು ಕೇದಾರ ಕಣಿವೆ. ಅಲ್ಲಿನ ಹಿಮಪಾತಕ್ಕೆ ಪ್ರವಾಸಿಗರಾಗಲಿ, ಸ್ಥಳೀಯರಾಗಲಿ ಹೋಗಲು ಇಚ್ಚಿಸುವುದಿಲ್ಲ. ಇಂತಹ ಸ್ಥಿತಿಯಲ್ಲಿ ಅಷ್ಟು ಚಳಿ, ಹಿಮಪಾತದ ನಡುವೆಯು ಲಲಿತ್ ಮಹಾರಾಜ್ ಎಂಬ ಸನ್ಯಾಸಿ ಕೇದಾರ ಕಣಿವೆಯಲ್ಲಿರುವ ಭೈರವ ದೇವಾಲಯದಲ್ಲಿ ವಾಸಿಸುವ ಮೂಲಕ ಅಚ್ಚರಿಯನ್ನು ಸೃಷ್ಟಿಸಿದ್ದಾರೆ.
ಸಾಮಾನ್ಯವಾಗಿ ಪ್ರತಿವರ್ಷ ಹಿಮಪಾತದ ಸಮಯದಲ್ಲಿ ಕೇದಾರನಾಥ ದೇವಾಲಯವು ಸಂಪೂರ್ಣ ಹಿಮದಿಂದ ಮುಚ್ಚಿರುತ್ತದೆ. ಅಷ್ಟೇ ಅಲ್ಲದೆ ಕೇದಾರ ಕಣಿವೆಯಲ್ಲಿ ಸಾಮಾನ್ಯ ಜನರು ಕೂಡ ವಾಸಿಸಲು ಇಷ್ಟ ಪಡುವುದಿಲ್ಲ. ಆದರೆ ಈ ಸನ್ಯಾಸಿ ಮಾತ್ರ ಇಂತಹ ಪರಿಸ್ಥಿತಿಯಲ್ಲೂ ಅಷ್ಟು ಕೊರೆಯುವ ಚಳಿಯಲ್ಲೂ, ಹಿಮಪಾತದಲ್ಲೂ ಜಗ್ಗದೇ ಅಲ್ಲಿಯೇ ವಾಸಿಸಿ, ಪ್ರತಿ ದಿನ ದೇವರಿಗೆ ಪೂಜೆ, ಧ್ಯಾನ ಹಾಗೂ ಹರ ಹರ ಮಹದೇವ ಎನ್ನುವ ನಾಮ ಸ್ಮರಣೆ ಮಾಡುತ್ತ ಹಿಮಪಾತದಲ್ಲೇ ನೆಲೆಸಿದ್ದಾರೆ.
Lalit Maharaj Ji at Bhairav Mandir who spends 12 months in Kedar valley pic.twitter.com/Ow8rpzAVrI
— Weatherman Shubham (@shubhamtorres09) February 8, 2024
ಇದೀಗ ಅವರು ಆ ಭಾರಿ ಹಿಮಪಾತದಲ್ಲಿ ಇರುವ ಹಾಗೂ ಧ್ಯಾನ ಮಾಡುತ್ತಿರುವ ದೃಶ್ಯ ಎಲ್ಲೆಡೆ ವೈರಲ್ ಆಗ್ತಿದೆ. ಇದನ್ನು ನೋಡಿದ ಎಷ್ಟೋ ವೀಕ್ಷಕರು ಅಂತಹ ಹಿಮದಲ್ಲೂ ಈ ವ್ಯಕ್ತಿ ಅದು ಹೇಗೆ ಇದಾನೋ ಎಂಬ ಕುತೂಹಲ ಹುಟ್ಟಿದೆ.