ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ಈಗಾಗಲೇ ವಿರಾಟ್ ಕೊಹ್ಲಿ ಹೊರಗುಳಿದಿದ್ದಾರೆ. ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಳ್ಳದ ಕೊಹ್ಲಿ ಇದೀಗ ಉಳಿದ ಮೂರು ಪಂದ್ಯಗಳಿಂದಲೂ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ಅವರು ಸರಣಿಯ ಅವಧಿಗೆ ಲಭ್ಯರಿರುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ.
ಇನ್ನು ಈ ಬೆನ್ನಲ್ಲೇ ವಿರಾಟ್ ಮತ್ತೆ ಯಾವಾಗ ಮೈದಾನಕ್ಕೆ ಎಂಟ್ರಿ ಕೊಡ್ತಾರೆ ಎಂಬ ಪ್ರಶ್ನೆ ಇದೀಗ ಹುಟ್ಟಿಕೊಂಡಿದೆ. ಮೂಲಗಳ ಪ್ರಕಾರ ಜೂನ್ ನಲ್ಲಿ ಅಂದರೆ ಐಪಿಎಲ್ ಮೂಲಕ ಕಿಂಗ್ ಮತ್ತೆ ಫೀಲ್ಡ್ ಗೆ ಮರಳಲಿದ್ದಾರೆ.
ಹೌದು, ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಪಂದ್ಯ ಕೊನೆಗೊಂಡ ನಂತರ ಮತ್ತೆ ಯಾವ ಪಂದ್ಯವು ಇರುವುದಿಲ್ಲ, ಆದರೆ ಭಾರತ ತಂಡದ ಪ್ಲೇಯರ್ಸ್ ಸಂಪೂರ್ಣ ವಿಶ್ರಾಂತಿ ಪಡೆಯಲಿದ್ದಾರೆ.
ಇನ್ನು ಐಪಿಎಲ್ ಕೂಡ ಶುರುವಾಗಲಿದ್ದು, ಈ ಮೂಲಕ ವಿರಾಟ್ ಕೊಹ್ಲಿ ತಮ್ಮ ಆಟ ಮುಂದುವರಿಸಲಿದ್ದಾರೆ. ಈ ಬಾರಿಯ ಐಪಿಎಲ್ ಮಾರ್ಚ್ 22 ರಿಂದ ಶುರುವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.