ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ಕೆ.ಎಲ್ ರಾಹುಲ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಕ್ಷಣ ಅವರು ಮಾರ್ಚ್ 24 ರಂದು ಜನಿಸಿದ ತಮ್ಮ ಮುದ್ದಾದ ಮಗುವಿಗೆ ನಾಮಕರಣ ಕೂಡ ಮಾಡಿದ್ದಾರೆ.
ಕೆ.ಎಲ್ ರಾಹುಲ್ ಅವರ ಪತ್ನಿ ಅಥಿಯಾ ಶೆಟ್ಟಿ ಅವರು ಕಳೆದ ತಿಂಗಳು ಅಂದರೆ ಮಾರ್ಚ್ 24 ರಂದು ಕ್ಯೂಟ್ ಆಗಿರೋ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಇಂದು ತಮ್ಮ ಮುದ್ದಾದ ಕಂದಮ್ಮಗೆ ‘ಇವಾರಾ’ ಎಂದು ಕೆ.ಎಲ್ ರಾಹುಲ್ ಅವರ ಪತ್ನಿ ಅಥಿಯಾ ಶೆಟ್ಟಿ ಅವರು ನಾಮಕರಣ ಮಾಡಿದ್ದಾರೆ. ಫೋಟೋದಲ್ಲಿ ಮಗಳನ್ನು ಎತ್ತಿಕೊಂಡಿರುವ ರಾಹುಲ್ ಜೊತೆಯಲ್ಲಿ ಅಥಿಯಾ ಕೂಡ ಇದ್ದಾರೆ. ಮಗಳು ದೇವರ ಕೊಡುಗೆ ಎಂದು ಟ್ಯಾಗ್ಲೈನ್ ಬರೆದುಕೊಂಡಿದ್ದಾರೆ.
ಮಗಳ ಹೆಸರು ಇವಾರಾ ಆಗಿದ್ದು ಇದರ ಅರ್ಥ ‘ದೇವರ ಕೊಡುಗೆ’ ಎಂದು ದಂಪತಿ ತಿಳಿಸಿದ್ದಾರೆ. ಸದ್ಯ ಈ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು ಸೆಲೆಬ್ರಿಟಿಸ್ ಸೇರಿದಂತೆ ಸಾಕಷ್ಟು ಜನರು ಕಮೆಂಟ್ಸ್ ಮಾಡುತ್ತಿದ್ದಾರೆ.