ಕ್ರಿಕೆಟಿಗ ಸಂದೀಪ್‌ ಲಮಿಚನ್ನೆ ಗೆ ಎಂಟ ವರ್ಷ ಜೈಲು ಶಿಕ್ಷೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೇಪ್‌ ಕೇಸ್‌ ನಲ್ಲಿ ನೇಪಾಳ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ಐಪಿಎಲ್‌ ಆಟಗಾರ ಸಂದೀಪ್‌ ಲಮಿಚನ್ನೆ ಅವರಿಗೆ ನೇಪಾಳ ಕೋರ್ಟ್‌ ಎಂಟ ವರ್ಷ ಜೈಲು ಶಿಕ್ಷೆ ವಿಧಿಸಿದೆ.

2023ರ ಡಿಸೆಂಬರ್‌ನಲ್ಲಿ ಸಂದೀಪ್‌ ಲಮಿಚನ್ನೆ ಅವರನ್ನು ಈ ಕೇಸ್‌ನಲ್ಲಿ ಅಪರಾಧಿ ಎಂದು ಕೋರ್ಟ್‌ ಹೇಳಿತ್ತು. ಕಠ್ಮಂಡು ಜಿಲ್ಲಾ ನ್ಯಾಯಾಲಯವು 2022ರ ಆಗಸ್ಟ್‌ನಲ್ಲಿ ಕಠ್ಮಂಡುವಿನ ಹೋಟೆಲ್‌ವೊಂದರಲ್ಲಿ 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಸಂದೀಪ್‌ ಲಮಿಚನ್ನೆತಪ್ಪಿತಸ್ಥನೆಂದು ತೀರ್ಪು ನೀಡಿತ್ತು.

ಲಮಿಚನ್ನೆಯನ್ನು ಜನವರಿ 2023ರಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದ ಕೋರ್ಟ್‌, ಹಲವು ಕಾನೂನು ಪ್ರಕ್ರಿಯೆಗಳ ಬಳಿಕ ಈ ಕೇಸ್‌ಅನ್ನು ಫಾಸ್ಟ್‌ ಟ್ರ್ಯಾಕಿಂಗ್‌ಗೆ ವರ್ಗಾಯಿಸಿತ್ತು. ಆರೋಪಗಳ ಹೊರತಾಗಿಯೂ, ಸಂದೀಪ್‌ ಅವರು ಜಾಮೀನಿನ ಮೇಲೆ ತಮ್ಮ ದೇಶಕ್ಕಾಗಿ ಕ್ರಿಕೆಟ್ ಆಡುವುದನ್ನು ಮುಂದುವರಿಸಿದ್ದರು.

ನವೆಂಬರ್‌ನಲ್ಲಿ ನಡೆದ ಟಿ20 ಏಷ್ಯಾ ಫೈನಲ್ಸ್‌ನಲ್ಲಿ ಒಮಾನ್ ವಿರುದ್ಧ ನೇಪಾಳ ಪರ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಆದಾಗ್ಯೂ, ನ್ಯಾಯಾಲಯದ ನಿರ್ಧಾರವು ಇದೀಗ ಅವರ ಕ್ರಿಕೆಟ್ ವೃತ್ತಿಜೀವನವನ್ನು ಕೊನೆ ಮಾಡಿದ್ದು, ಈಗ ಅವರು ಜೈಲು ಶಿಕ್ಷೆಯನ್ನು ಎದುರಿಸಬೇಕಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!