ಹೊಸದಿಗಂತ ವರದಿ,ಮಂಗಳೂರು:
ಕಟೀಲು ಶ್ರೀ ಕ್ಷೇತ್ರಕ್ಕೆ ಕ್ರಿಕೆಟಿಗ ಶಿವಂ ದುಬೆ ಭೇಟಿ ನೀಡಿದರು.
ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುತ್ತಿರುವ ‘ಪಿಲಿನಲಿಕೆ’ ಸಂಭ್ರಮದಲ್ಲಿ ಭಾಗಿಯಾಗಲು ಮಂಗಳೂರಿಗೆ ಆಗಮಿಸಿದ ಅವರು,ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ ನೀಡಿ ದೇವರ ದರುಶನ ಪಡೆದರು. ಬಳಿಕ ಶ್ರೀ ದೇವರ ಪ್ರಸಾದ ಸ್ಬೀಕರಿಸಿದರು .