ಸಿರಿಯಾದಲ್ಲಿ ಬಿಕ್ಕಟ್ಟು: ಶಾಂತಿಯುತ ಪರಿಹಾರಕ್ಕೆ ಸಲಹೆ ನೀಡಿದ ಭಾರತ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಸಿರಿಯಾದಲ್ಲಿಇಸ್ಲಾಮಿಸ್ಟ್ ಬಂಡುಕೋರರು ಅಧಿಕಾರವನ್ನು ವಶಪಡಿಸಿಕೊಂಡ ನಂತರ ಅಲ್ಲಿನ ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರದ ಮಹತ್ವವನ್ನು ಭಾರತ ಒತ್ತಿ ಹೇಳಿದೆ.

ಈ ನಿರ್ಣಾಯಕ ಘಟ್ಟದಲ್ಲಿ ಸಿರಿಯಾದ ಏಕತೆ, ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಆದ್ಯತೆ ನೀಡುವ ಎಲ್ಲಾ ಪಕ್ಷಗಳ ಅಗತ್ಯ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಸೋಮವಾರ ಹೇಳಿದೆ.

ಸಿರಿಯಾದಲ್ಲಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಈ ಪ್ರದೇಶದಲ್ಲಿನ ತ್ವರಿತಗತಿಯ ಸನ್ನಿವೇಶದ ಬಗ್ಗೆ ಭಾರತ ಕಳವಳ ಹೊಂದಿದೆ. ಸಿರಿಯಾದ ರಾಜಕೀಯ ಶಾಂತಿಯುತ ಮತ್ತು ಅಂತರ್ಗತ ಹಾಗೂ ಸಿರಿಯನ್ ಸಮಾಜದ ಎಲ್ಲಾ ವರ್ಗಗಳ ಆಕಾಂಕ್ಷೆಗಳು ಮತ್ತು ಹಿತಾಸಕ್ತಿಗಳನ್ನು ಗೌರವಿಸಬೇಕು ಎಂದು ಸಲಹೆ ನೀಡಿದೆ.

ಡಮಾಸ್ಕಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಜಾಗರೂಕವಾಗಿದೆ ಸಿರಿಯಾದಲ್ಲಿರುವ ಭಾರತೀಯರ ಸುರಕ್ಷತೆ ಮತ್ತು ಭದ್ರತೆಗಾಗಿ ಅಲ್ಲಿನ ಭಾರತೀಯ ಸಮುದಾಯದೊಂದಿಗೆ ನಿಕಟ ಸಂಪರ್ಕದಲ್ಲಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭರವಸೆ ನೀಡಿದೆ.

ಡಿಸೆಂಬರ್ 6 ರಂದು ಭಾರತ ಸರ್ಕಾರವು ಭದ್ರತಾ ಪರಿಸ್ಥಿತಿಯಿಂದಾಗಿ ಸಿರಿಯಾದಲ್ಲಿರುವ ಭಾರತೀಯರು ಸ್ವದೇಶಕ್ಕೆ ವಾಪಾಸ್ಸಾಗುವಂತೆ ಕರೆ ನೀಡಿತ್ತು. ತುರ್ತು ಸಹಾಯವಾಣಿ ಮತ್ತು ಇಮೇಲ್ ID [email protected]) ಬಳಸಿಕೊಂಡು ಡಮಾಸ್ಕಸ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಿರಿಯಾದಲ್ಲಿರುವ ಭಾರತೀಯ ನಾಗರಿಕರಿಗೆ ಶಿಫಾರಸು ಮಾಡಿದೆ.

ಸಿರಿಯಾದಿಂದ ಬೇಗನೆ ಹೊರಡುವವರಿಗೆ ವಿಮಾನ ಲಭ್ಯವಿದ್ದು, ಇತರರು ತೀವ್ರ ಜಾಗ್ರತೆ ವಹಿಸುವಂತೆ, ಸುರಕ್ಷತೆಗೆ ಆದ್ಯತೆ ನೀಡುವಂತೆ ಸೂಚಿಸಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!