ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಕೆನಡಾ ನಡುವಣ ರಾಜತಾಂತ್ರಿಕ ಬಿಕ್ಕಟ್ಟು ಉಭಯ ದೇಶಗಳ ಮಧ್ಯೆ ಯಾವುದೇ ಪರಿಣಾಮ ಬೀರುವುದಿಲ್ಲ, ಸೇನಾ ಬಾಂಧವ್ಯಕ್ಕೂ ಧಕ್ಕೆ ಉಂಟು ಮಾಡುವುದಿಲ್ಲ ಎಂದು ಕೆನಡಾ ಸೇನಾಪಡೆ ಉಪ ಮುಖ್ಯಸ್ಥ ಮೇಜರ್ ಜನರಲ್ ಪೀಟರ್ ಸ್ಕಾಟ್ ಹೇಳಿದ್ದಾರೆ.
ಇಂಡೊ- ಪೆಸಿಫಿಕ್ ಸೇನಾ ಮುಖ್ಯಸ್ಥರ ಸಮಾವೇಶದಲ್ಲಿ (ಇಪಿಎಸಿಸಿ) ಭಾಗವಹಿಸಿದ ಅವರು ನನಗೆ ತಿಳಿದಿರುವಂತೆ, ಬಿಕ್ಕಟ್ಟು ಈ ಸಮಯದಲ್ಲಿ ನಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರಾಜಕೀಯ ಹಂತದಲ್ಲಿ ಈ ವಿಷಯ ಬಗೆಹರಿಯಬೇಕಿದೆ’ ಎಂದು ತಿಳಿಸಿದರು.
ಸಮಾವೇಶದಲ್ಲಿ ಭಾಗವಹಿಸುವುದು ನಮಗೆ ಸಂತೋಷದ ವಿಷಯ. ಈ ಹಂತದಲ್ಲಿ ವಿವಾದವು ಯಾವ ವಿಷಯದ ಮೇಲೂ ಕರಾಳ ಛಾಯೆಯನ್ನು ಬೀರಿಲ್ಲ’ಎಂದು ಅವರು ಅಭಿಪ್ರಾಯಪಟ್ಟರು.
‘ಭಾರತದ ಸೇನಾಪಡೆ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರೊಂದಿಗೆ ನಾನು ಸೋಮವಾರ ರಾತ್ರಿ ಮಾತನಾಡಿದ್ದೇನೆ. ಇದು ರಾಜಕೀಯ ವಿಷಯ, ನಮ್ಮ ಬಾಂಧವ್ಯದಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಇಬ್ಬರೂ ಒಪ್ಪಿಕೊಂಡಿದ್ದೇವೆ ಎಂದರು.