ಸಾಮಾಗ್ರಿಗಳು
ಬೇಬಿ ಕಾರ್ನ್- 1 ಬಟ್ಟಲು
ಕಡಲೆ ಹಿಟ್ಟು- 1 ಬಟ್ಟಲು
ಈರುಳ್ಳಿ- 1
ಬ್ರೆಡ್ ಪೌಡರ್- 1 ಬಟ್ಟಲು
ಅಕ್ಕಿ ಹಿಟ್ಟು- 1 ಚಮಚ
ಕ್ಯಾಪ್ಸಿಕಂ- 1
ಅಚ್ಚ ಖಾರದ ಪುಡಿ- 1 ಚಮಚ
ಕಾಳುಮೆಣಿಸಿನ ಪುಡಿ- ಅರ್ಧ ಚಮಚ
ಉಪ್ಪು-ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಲು ಇಡಿ. ಮತ್ತೊಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಕಾಳು ಮೆಣಸಿನ ಪುಡಿ, ಖಾರದ ಪುಡಿ, ಅಕ್ಕಿ ಹಿಟ್ಟು, ಉಪ್ಪು ಹಾಗೂ ಸ್ವಲ್ಪ ನೀರು ಹಾಕಿ ದಪ್ಪ ಮಿಶ್ರಣ ಮಾಡಿಕೊಳ್ಳಿ. ಒಲೆಯ ಮೇಲೆ ಬಾಣಲೆ ಇಟ್ಟು, ಎಣ್ಣೆ ಹಾಕಿ. ಬಿಸಿಯಾದ ಮೇಲೆ ಕತ್ತರಿಸಿದ ಕ್ಯಾಪ್ಸಿಕಂ ಹಾಗೂ ಕತ್ತರಿಸಿದ ಈರುಳ್ಳಿಯನ್ನು ಎಣ್ಣೆಗೆ ಹಾಕಿ ಫ್ರೈ ಮಾಡಿ. ಬದಿಗಿಟ್ಟುಕೊಳ್ಳಿ.
ನಂತರ ಬೇಬಿ ಕಾರ್ನ್ ಪೀಸ್ ಗಳನ್ನು ಕಡಲೆ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ. ನಂತರ ಬ್ರೆಡ್ ಪೌಡರ್ ನಲ್ಲಿ ಹೊರಳಿಸಿ ಎಣ್ಣೆಯಲ್ಲಿ ಬಿಡಿ. ಬೇಬಿ ಕಾರ್ನ್ ಗೋಲ್ಡನ್ ಬಣ್ಣಕ್ಕೆ ಬರ್ತಿದ್ದಂತೆ ತೆಗೆದು, ಕರಿದ ಈರುಳ್ಳಿ, ಕ್ಯಾಪ್ಸಿಕಂ ಮೇಲೆ ಉದುರಿಸಿದರೆ ರುಚಿಕರಾದ ಬೇಬಿ ಕಾರ್ನ್ ಫ್ರೈ ಸವಿಯಲು ಸಿದ್ಧ.