“ಮಾರ್ಕೋ”ಗೆ ಟೀಕೆ: ಭಾಗ 2 ಕೈ ಬಿಡೋ ನಿರ್ಧಾರ ಮಾಡಿದ ಉನ್ನಿ ಮುಕುಂದನ್! ನೆಟ್ಟಿಗರಿಂದ ಶಭಾಷ್ ಗಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಲಯಾಳಂ ಚಿತ್ರರಂಗದ ಯುವನಟ ಉನ್ನಿ ಮುಕುಂದನ್, ಒಂದು ಕಡೆ ತಮ್ಮ ಅಭಿನಯ ಸಾಮರ್ಥ್ಯದಿಂದ ಜನಪ್ರಿಯರಾಗಿದ್ದು, ಮತ್ತೊಂದು ಕಡೆ ತಮ್ಮ ಆಯ್ದ ಕಥಾವಸ್ತುಗಳಿಂದ ಸಿನಿಪ್ರಿಯರಲ್ಲಿ ಭಿನ್ನ ಅಭಿಪ್ರಾಯ ಹುಟ್ಟಿಸುತ್ತಿದ್ದಾರೆ. “ಮಾಳಿಗಪ್ಪುರಂ” ಸಿನಿಮಾದ ಮೂಲಕ ಕಂಟೆಂಟ್ ಆಧಾರಿತ ಅದ್ಭುತ ಚಿತ್ರ ನೀಡಿದ ಅವರು, ಮಕ್ಕಳಿಗೂ ಹತ್ತಿರವಾದ ಕಲಾವಿದನಾಗಿ ಗುರುತಿಸಿಕೊಂಡಿದ್ದರು.

ಆದರೆ, ಇತ್ತೀಚೆಗೆ ಬಿಡುಗಡೆಯಾದ “ಮಾರ್ಕೋ” ಚಿತ್ರದಲ್ಲಿ ಉನ್ನಿ ಮುಕುಂದನ್ ಒಂದು ಮಾಸ್ ಆಕ್ಷನ್ ಹೀರೋ ಇಮೇಜ್‌ನ್ನು ತೋರಿಸಿದರು. ಚಿತ್ರವು ಬಾಕ್ಸಾಫೀಸ್‌ನಲ್ಲಿ ಭರ್ಜರಿ 100 ಕೋಟಿ ರೂ. ಗಳಿಸಿದ್ದರೂ ಕೂಡಾ, ಅತಿಯಾದ ಹಿಂಸಾತ್ಮಕ ದೃಶ್ಯಗಳಿಗಾಗಿ ಬಹುಮಟ್ಟಿನಲ್ಲಿ ಟೀಕೆಗೆ ಗುರಿಯಾಯಿತು. ಕೆಲ ಪ್ರೇಕ್ಷಕರು “ಇಷ್ಟೊಂದು ಹಿಂಸೆಯ ವಿಜೃಂಭಣೆ ಬೇಕಿತ್ತಾ?” ಎಂಬ ಪ್ರಶ್ನೆ ಎತ್ತಿದರು.

ಈ ಹಿಂದಿನ ಕೆಲವು ಮಲಯಾಳಂ ಹಿಟ್‌ಗಳಂತೆ “ಮಾರ್ಕೋ” ಕೂಡಾ ಹಿಂಸಾತ್ಮಕ ಕಥಾವಸ್ತು ಹೊಂದಿದ್ದರೂ, ಇದರಲ್ಲಿ ದುರ್ಬಲ ತಾತ್ವಿಕ ಹಿನ್ನೆಲೆ ಮತ್ತು ಗ್ಲೋರಿಫೈಡ್ ವಿಲನಿಸಂ ಎನ್ನುವ ಟೀಕೆಗಳು ಹೆಚ್ಚಾಗಿ ಕೇಳಿಬಂದವು. ಹೀಗಾಗಿ, ನಟ ಉನ್ನಿ ಮುಕುಂದನ್ ಇದಕ್ಕೆ ಸ್ಪಂದನೆ ನೀಡಿದ್ದು, ಮುಂದಿನ ಭಾಗ “ಮಾರ್ಕೋ 2” ಬಗ್ಗೆ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ, ಅಭಿಮಾನಿಯೊಬ್ಬರ “ಮಾರ್ಕೋ 2 ಯಾವಾಗ ಬರ್ತದೆ?” ಎಂಬ ಪ್ರಶ್ನೆಗೆ ಉತ್ತರವಾಗಿ, “ನಾನು ಆ ಚಿತ್ರವನ್ನು ಕೈಬಿಟ್ಟಿದ್ದೇನೆ. ಅತಿಯಾದ ನೆಗೆಟಿವ್ ಟಾಕ್ ಈ ನಿರ್ಧಾರಕ್ಕೆ ಕಾರಣವಾಗಿದೆ” ಎಂದು ಹೇಳಿದ್ದಾರೆ.

ಈ ನಡವಳಿಕೆಯಿಂದ ಉನ್ನಿ ಮುಕುಂದನ್ ಚಲನಚಿತ್ರ ಲೋಕದಲ್ಲಿ ದೊಡ್ಡತನ ತೋರಿಸಿದ್ದಾರೆ ಎಂಬ ಅಭಿಪ್ರಾಯಗಳು ಉಂಟಾಗಿದ್ದು, ಜನಪ್ರಿಯತೆಯೊಂದಿಗೆ ಜವಾಬ್ದಾರಿಯನ್ನೂ ಹೊಂದಿರುವ ನಟನಿಗೆ ಇದು ಪಾಸಿಟಿವ್ ಇಮೇಜ್ ಕೊಂಡುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!