March 17, 2026
Tuesday, March 17, 2026
spot_img

ಟೀಕೆ ಮಾಡೋರನ್ನು ಕಡೆಗಣಿಸಿ ಬಿಡ್ಬೇಕು: ತ್ರಿಷಾ ಪರ ಬ್ಯಾಟ್ ಬೀಸಿದ ನಟಿ ಖುಷ್ಬೂ ಸುಂದರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಚಿತ್ರರಂಗದಲ್ಲಿ ವಿಜಯ್ ಮತ್ತು ತ್ರಿಷಾ ಕೃಷ್ಣನ್ ನಡುವಿನ ಸಂಬಂಧದ ಕುರಿತು ಹರಿದಾಡುತ್ತಿರುವ ಚರ್ಚೆಗಳು ಹೊಸ ತಿರುವು ಪಡೆದಿವೆ. ವೈಯಕ್ತಿಕ ಆರೋಪಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾದ ಟೀಕೆಗಳ ನಡುವೆಯೇ, ಈ ವಿವಾದಕ್ಕೆ ನಟಿ ಹಾಗೂ ರಾಜಕೀಯ ನಾಯಕಿ ಖುಷ್ಬೂ ಸುಂದರ್ ಎಂಟ್ರಿ ಕೊಟ್ಟಿದ್ದಾರೆ.

ವಿಜಯ್ ಅವರ ವೈಯಕ್ತಿಕ ಜೀವನದ ಬಗ್ಗೆ ಹರಿದಾಡುತ್ತಿರುವ ಆರೋಪಗಳು, ವಿಶೇಷವಾಗಿ ನಟಿಯೊಂದಿಗೆ ಸಂಬಂಧದ ಮಾತುಗಳು, ಅಭಿಮಾನಿಗಳಲ್ಲೂ ಚರ್ಚೆಗೆ ಕಾರಣವಾಗಿವೆ. ಇತ್ತೀಚೆಗೆ ಇಬ್ಬರೂ ಒಂದೇ ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡಿರುವುದು ಈ ಗಾಸಿಪ್‌ಗಳಿಗೆ ಮತ್ತಷ್ಟು ತುಪ್ಪ ಸುರಿದಂತಾಗಿತ್ತು.

ಇದನ್ನೂ ಓದಿ:

ಈ ಹಿನ್ನೆಲೆದಲ್ಲಿ ಮಾತನಾಡಿದ ಖುಷ್ಬೂ, ತ್ರಿಷಾ ಅವರ ವ್ಯಕ್ತಿತ್ವವನ್ನು ಪ್ರಶಂಸಿಸಿ, ಅವರು ಅತ್ಯಂತ ಗೌರವಾನ್ವಿತ ಹಾಗೂ ಸರಳ ಸ್ವಭಾವದವರು ಎಂದು ಹೇಳಿದ್ದಾರೆ. ಸಾರ್ವಜನಿಕ ವ್ಯಕ್ತಿಗಳ ವೈಯಕ್ತಿಕ ಜೀವನದ ಮೇಲೆ ಅನಗತ್ಯ ಆಸಕ್ತಿ ತೋರಿಸುವ ಪ್ರವೃತ್ತಿ ಹೆಚ್ಚುತ್ತಿರುವುದನ್ನು ಅವರು ಟೀಕಿಸಿದ್ದಾರೆ.

ಇತರರ ಜೀವನದ ಬಗ್ಗೆ ಟೀಕೆ ಮಾಡುವವರನ್ನು ಕಡೆಗಣಿಸುವುದು ಉತ್ತಮ ಎಂದು ಖುಷ್ಬೂ ಅಭಿಪ್ರಾಯಪಟ್ಟಿದ್ದಾರೆ. ಈ ಹೇಳಿಕೆಗಳ ಮೂಲಕ ತ್ರಿಷಾ ಪರವಾಗಿ ಅವರು ನಿಂತಿರುವುದು ಸ್ಪಷ್ಟವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !