June 9, 2026
Tuesday, June 9, 2026
spot_img

ನೀರು ಕುಡಿಯಲು ನದಿಗಿಳಿದ ಕರುವಿನ‌ ಮೇಲೆ ಮೊಸಳೆ ದಾಳಿ

ಹೊಸದಿಗಂತ ವರದಿ ದಾಂಡೇಲಿ:

ನೀರು ಕುಡಿಯಲೆಂದು ನದಿಗಿಳಿದಿದ್ದ ಕರುವಿನ‌ ಮೇಲೆ ಮೊಸಳೆಯೊಂದು ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ನಗರದ ಸಮೀಪದಲ್ಲಿರುವ ಹಾಲಮಡ್ಡಿಯಲ್ಲಿ ಮಂಗಳವಾರ ಸಂಜೆ ನಡೆದಿದೆ.

ಹಾಲಮಡ್ಡಿಯಲ್ಲಿ ನೀರು ಕುಡಿಯಲೆಂದು ನದಿಗಿಳಿದಿದ್ದ ಕರುವಿನ‌ ಮೇಲೆ ಮೊಸಳೆ ಏಕಾಏಕಿ ದಾಳಿ ಮಾಡಿದೆ. ದಾಳಿಯಿಂದಾಗಿ ಕರುವಿನ ಕೈ ಮತ್ತು ಕಾಲಿಗೆ ಗಂಭೀರ ಗಾಯವಾಗಿದೆ. ಸ್ಥಳೀಯರು ತಕ್ಷಣವೆ ಕರುವನ್ನು ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ:

ಸ್ಥಳಕ್ಕೆ ಅರಣ್ಯ ಇಲಾಖೆಯ ಚಂದ್ರಕಾಂತ ಮಿರಾಶಿ ಮತ್ತು ಪಶುವೈದ್ಯ ಇಲಾಖೆಯ ಲವ ಶೆಟ್ಟಪ್ಪನವರ ಭೇಟಿ ನೀಡಿದ್ದಾರೆ. ಲವ ಶೆಟ್ಟಪ್ಪನವರ ಕರುವಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದ್ದಾರೆ. ಸ್ಥಳಕ್ಕೆ ಮಾಜಿ ಗ್ರಾ.ಪಂ ಸದಸ್ಯ ಸುಭಾಷ ಬೋವಿವಡ್ಡರ ಅವರು ಭೇಟಿ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !