ಕಾಗಿಣಾ ನದಿಯಲ್ಲಿ ಮೊಸಳೆ ಪತ್ತೆ, ಆತಂಕದಲ್ಲಿ ಜನ

ಹೊಸದಿಗಂತ ವರದಿ, ಕಲಬುರಗಿ
ಜಿಲ್ಲೆಯ ಸೇಡಂ ತಾಲೂಕಿನ ಸಂಗಾವಿ (ಎಂ) ಗ್ರಾಮದ ಬಳಿ ಕಾಗಿಣಾ ನದಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಮೊಸಳೆಯನ್ನು ನದಿಯ ದಡದಲ್ಲಿ ನೋಡಿ ಜನರು ಭಯಭೀತಗೊಂಡಿದ್ದಾರೆ. ಕೂಡಲೇ ಮೊಸಳೆಯನ್ನು ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮನವಿ ಮಾಡಿದ್ದಾರೆ.
ನದಿಯಲ್ಲಿ ನೀರು ಕುಡಿಯಲು ಗ್ರಾಮದ ದನ ಕರುಗಳು, ಜಾನವರುಗಳು ನದಿ ದಡಕ್ಕೆ ಹೋಗುತ್ತವೆ. ಮೊಸಳೆಯು ನದಿ ದಡಕ್ಕೆ ಬರುತ್ತಿದೆ ಹೀಗಾಗಿ ಮೊಸಳೆ ಹಿಡಿಯುವಂತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!