ಹಾಸನಾಂಬೆ ದೇವಿ ದರುಶನಕ್ಕೆ ಭಕ್ತರ ದಂಡು, ಭಕ್ತಿಯಲ್ಲಿ ಮಿಂದೆದ್ದ ಜನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವರ್ಷಕ್ಕೊಮ್ಮೆ ದರುಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬೆಯ ದರುಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ.

ಗುರುವಾರ ದೇವಿಯ ದೇಗುಲದ ಬಾಗಿಲು ತೆರೆದು ಪೂಜೆ ಕೈಂಕರ್ಯಗಳು ನೆರವೇರಿದ್ದು, ಶುಕ್ರವಾರದಿಂದ ದೇವಿ ದರುಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ಸಾರ್ವಜನಿಕರ ದರುಶನಕ್ಕೆ ಇಂದು ಎರಡನೇ ದಿನವಾಗಿದ್ದು, ಬೆಳಗ್ಗೆಯೇ ಭಕ್ತರು ಸರತಿ ಸಾಲಿನಲ್ಲಿ ನಿಂತು ದರುಶನಕ್ಕೆ ಕಾತರರಾಗಿದ್ದಾರೆ.

ಬೆಳಗ್ಗೆಯೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಬೇಗ ಬೇಗ ದರುಶನ ಆಗುವಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ವಿಶೇಷ ಕ್ಯೂ ಹಾಗೂ ಸ್ಪೆಶಲ್ ಕ್ಯೂ ತೆರೆದಿದ್ದು, ಅಲ್ಲಿಯೂ ಜನರು ದರುಶನಕ್ಕೆ ನಿಂತಿದ್ದಾರೆ.

ವೀಕೆಂಡ್ ಆದ ಕಾರಣ ಜನರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ನವೆಂಬರ್ 15 ರವರೆಗೂ ಜಾತ್ರಾ ಮಹೋತ್ಸವ ನೆರವೇರಲಿದ್ದು, ನ.15 ರಂದು ಭಕ್ತರಿಗೆ ದೇವಿ ದರುಶನಕ್ಕೆ ವ್ಯವಸ್ಥೆ ಇರುವುದಿಲ್ಲ. ಈ ಬಾರಿ ಜರ್ಮನ್ ಟೆಂಟ್, ಫ್ಯಾನ್, ಎಸಿ ವ್ಯವಸ್ಥೆ ಮಾಡಿದ್ದು, ಮೂರು ಹೊತ್ತು ಪ್ರಸಾದ ನೀಡಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!