Monday, November 28, 2022

Latest Posts

ನಿರ್ಣಾಯಕ ಪಂದ್ಯ: ಭಾರತಕ್ಕೆ 187 ರನ್ ಟಾರ್ಗೆಟ್ ನೀಡಿದ ಆಸ್ಟ್ರೇಲಿಯಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ನಿರ್ಣಾಯಕ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 7 ವಿಕೆಟ್ ನಷ್ಟಕ್ಕೆ 186 ರನ್ ಸಿಡಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆಯಿತು ಕ್ಯಾಮರೂನ್ ಗ್ರೀನ್ ಹಾಗೂ ನಾಯಕ ಆ್ಯರೋನ್ ಫಿಂಚ್ 44 ರನ್ ಜೊತೆಯಾಟ ನೀಡಿದರು. ಆದರೆ ಫಿಂಚ್ ಹೋರಾಟ 7 ರನ್ ಸಿಡಿಸಿ ಔಟಾದರು. ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದ ಕ್ಯಾಮರೂನ್ ಗ್ರೀನ್ ಹಾಫ್ ಸೆಂಚುರಿ ಸಿಡಿಸಿದರು. ಗ್ರೀನ್ ಕೇವಲ 21 ಎಸೆತದಲ್ಲಿ 52 ರನ್ ಸಿಡಿಸಿ ಔಟಾದರು.

ಗ್ಲೆನ್ ಮ್ಯಾಕ್ಸ್‌ವೆಲ್ 6 ರನ್ ಸಿಡಿಸಿ ಔಟಾದರು. ಸ್ಟೀವನ್ ಸ್ಮಿತ್ 9 ರನ್ ಸಿಡಿಸಿ ಹೋರಾಟ ಅಂತ್ಯಗೊಳಿಸಿದರು. ಜೋಶ್ 24 ರನ್ ಸಿಡಿಸಿ ಔಟಾದರು. ಇತ್ತ ಮ್ಯಾಥ್ಯೂ ವೇಡ್ 1 ರನ್ ಸಿಡಿಸಿ ಔಟಾದರು. ಟಿಮ್ ಡೇವಿಡ್ 54 ರನ್ ಸಿಡಿಸಿ ಔಟಾದರು. ಸ್ಯಾಮ್ಸ್ ಅಜೇಯ 28 ರನ್ ಸಿಡಿಸಿದರು. ಈ ಮೂಲಕ 7 ವಿಕೆಟ್ ನಷ್ಟಕ್ಕೆ 186 ರನ್ ಸಿಡಿಸಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!