October 16, 2026
Friday, October 16, 2026
spot_img

ಕ್ರೂಸರ್‌- ಲಾರಿ ನಡುವೆ ಭೀಕರ ಅಪಘಾತ : ಒಂದೇ ಕುಟುಂಬದ ಐದು ಮಂದಿ ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಲಬುರಗಿಯ ಚಿತ್ತಾಪೂರ ತಾಲೂಕಿನ ಲಾಡ್ಲಾಪೂರ ಬಳಿ ಕ್ರೂಸರ್‌ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಒಂದು ಕುಟುಂಬದ ಐದು ಮಂದಿ ಮೃತಪಟ್ಟಿದ್ದಾರೆ.

ಯಾದಗಿರಿಯ ಆಸ್ಪತ್ರೆಗೆ ಹೋಗಿದ್ದ ಕುಟುಂಬದವರು ಮನೆಗೆ ವಾಪಾಸಾಗುವಾಗ ಅಪಘಾತ ಸಂಭವಿಸಿದೆ. ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಾಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಇಂಗಳಗಿ ಗ್ರಾಮದ ತೋಲುಸಾಬ್‌ ಕ್ಯಾಶ್ವಾರ್‌, ಹುಸೇನ್‌ ಶಾ, ಮೈಬೂಬ್‌ ಅಲಿ, ರಸೂಲ್‌ ಬೀ, ಫಾತೀಮಾ ಅಲಿ ಮೃತರು. ಲಾಡ್ಲಾಪುರ ಗ್ರಾಮದ ಹೆದ್ದಾರಿ ಬಳಿ ಹೋಗುತ್ತಿದ್ದ ಕ್ರೂಸ್‌ಗೆ ವೇಗವಾಗಿ ಬಂದಿದ್ದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತ ಸಂಭವಿಸುತ್ತಿದ್ದಂತೆಯೇ ಲಾರಿ ಚಾಲಕ ಪರಾರಿಯಾಗಿದ್ದಾನೆ.

Must Read