ಸಿದ್ದರಾಮೋತ್ಸವಕ್ಕಾಗಿ ತೆರಳುತ್ತಿದ್ದ ಕ್ರೂಸರ್ ಅಪಘಾತ: ಓರ್ವ ಬಲಿ, ನಾಲ್ವರ ಸ್ಥಿತಿ ಗಂಭೀರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಗಲಕೋಟೆ ಜಿಲ್ಲೆಯಿಂದ ಸಿದ್ದರಾಮೋತ್ಸವಕ್ಕಾಗಿ ದಾವಣಗೆರೆಗೆ ತೆರಳುತ್ತಿದ್ದ ಕ್ರೂಸರ್ ಅಪಘಾತಕ್ಕೀಡಾಗಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ಬಾದಾಮಿ ತಾಲೂಕಿನ ಹೂಲಗೇರಿ ಕ್ರಾಸ್ ಬಳಿ ಅಪಘಾತ ನಡೆದಿದೆ. ಮುಧೋಳ ತಾಲೂಕಿನ ಚಿಕ್ಕ ಆಲಗುಂಡಿಯ ಪ್ರಕಾಶ ಬಡಿಗೇರ (34) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ವೇಗವಾಗಿ ಹೊರಟಿದ್ದ ಕ್ರೂಸರ್ ಎದುರಿಗೆ ಬಂದ ಗೂಡ್ಸ್ ವಾಹನಕ್ಕೆ ಮುಖಾಮುಖಿಯಾಗಿದೆ. ಅಪಘಾತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
6 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕ್ರೂಸರ್‌ನಲ್ಲಿ ಒಟ್ಟು 12 ಜನ ಪ್ರಯಾಣಿಸುತ್ತಿದ್ದರು‌ ಎಂದು ತಿಳಿದುಬಂದಿದೆ. ಇವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!