SHOCKING VIDEO| ತುಂಬಾ ಅದೃಷ್ಟವಂತರು ಕಣಣ್ಣೋ, ಕ್ಷಣಾರ್ಧಲ್ಲಿ ಸಾವಿನ ದವಡೆಯಿಂದ ಪಾರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಾಸಕ್ಕೆ ಹೋಗುವ ಯೋಜನೆಯಲ್ಲಿದ್ದರೆ ಬಹಳ ಎಚ್ಚರಿಕೆ ಅಗತ್ಯ. ಎಲ್ಲಕ್ಕಿಂತ ಮುಖ್ಯವಾಗಿ ಕಡಲತೀರಗಳು ಮತ್ತು ಬಂಡೆಗಳಿರುವ ಸ್ಥಳಗಳಿಗೆ ಹೋಗುವಾಗ, ಸುತ್ತಮುತ್ತ ಗಮನಿಸಬೇಕು. ಜಾಗರೂಕತೆಯ ಕೊರತೆಯಿಂದ ಅನೇಕ ಜನರು ಇಂತಹ ಸ್ಥಳಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಫಾಲ್ಸ್‌, ಸಮುದ್ರ ತೀರಗಳಲ್ಲಿ ಸ್ವಲ್ಪ ಅಜಾರೂಕತೆಯಿಂದ ಜೀವ ಕಳೆದುಕೊಂಡಿದ್ದಾರೆ. ಅದೃಷ್ಟವಶಾತ್‌ ವೈರಲ್‌ ವಿಡಿಯೋದಲ್ಲಿ ಪ್ರವಾಸಿಗರು ಕ್ಷಣಾರ್ಧದಲ್ಲಿ ಸಾವಿನ ದವಡೆಯಿಂದ ಪಾರಾದರು.

ಬ್ರಿಟನ್‌ನ ಡಾರ್ಸೆಟ್ ವೆಸ್ಟ್‌ನ ಕರಾವಳಿ ಪ್ರವಾಸಿ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ. ಮೂವರು ಪ್ರವಾಸಿಗರು ಕಡಲತೀರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅದರ ಪಕ್ಕದ ಎತ್ತರದ ಬೆಟ್ಟದಿಂದ ಮಣ್ಣು ಇದ್ದಕ್ಕಿದ್ದಂತೆ ಕುಸಿದಿದೆ. ಆ ವೇಳೆ ಅಪಾಯವನ್ನು ಗಮನಿಸಿ ಎಚ್ಚೆತ್ತ ಪ್ರವಾಸಿಗರು ವೇಗವಾಗಿ ಓಡಿದ್ದಾರೆ.

ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಹಾಗಾಗಿ ಬೆಟ್ಟ, ಕಡಲತೀರ, ಅರಣ್ಯ ಪ್ರದೇಶಗಳಿಗೆ ಹೋಗುವಾಗ ಎಚ್ಚರಿಕೆ ಅಗತ್ಯ. ಈ ವೀಡಿಯೊವನ್ನು ಡಾರ್ಸೆಟ್ ಕೌನ್ಸಿಲ್ ಯುಕೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಬಂಡೆಗಳು ಮತ್ತು ಭೂಕುಸಿತಗಳು ಯಾವುದೇ ಸಮಯದಲ್ಲಿ ಸಂಭವಿಸಬಹುದು, ಜನ ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!