October 9, 2026
Friday, October 9, 2026
spot_img

ವಿಪರೀತ ಸಾಲದ ಹೊರೆಯಿಂದ ನೊಂದು ಲಾಡ್ಜ್‌ನಲ್ಲಿ ಆತ್ಮ*ಹತ್ಯೆಗೆ ಶರಣಾದ ಕ್ರಶರ್‌ ಉದ್ಯಮಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಪರೀತ ಸಾಲದಿಂದ ಮನನೊಂದು ಕ್ರಶರ್‌ ಉದ್ಯಮಿಯೊಬ್ಬರು ಲಾಡ್ಜ್‌ನಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಗೋಪಾಳ ಬಡಾವಣೆಯ ನಿವಾಸಿ ನವೀನ್ ಕುಮಾರ್ ಬಳಗಾರ್ ಅಲಿಯಾಸ್ ಬಸವರಾಜ್ (42) ಮೃತರು. ನಗರದ ಲಾಡ್ಜ್‌ ಒಂದರಲ್ಲಿ ಕೊಠಡಿ ಬಾಡಿಗೆಗೆ ಪಡೆದುಕೊಂಡು ಅಲ್ಲಿ ಅವರು ನೇಣಿಗೆ ಶರಣಾಗಿದ್ದಾರೆ. ಕಳೆದ 5 ವರ್ಷಗಳಿಂದ ಉದ್ಯಮದಲ್ಲಿ ಉಂಟಾಗಿದ್ದ ನಷ್ಟ ಹಾಗೂ ವಿಪರೀತ ಸಾಲದ ಹೊರೆಯಿಂದಾಗಿ ಅವರು ಮನನೊಂದಿದ್ದರು ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Must Read