ಹೊಸದಿಗಂತ ಡಿಜಿಟಲ್ ಡೆಸ್ಕ್: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ಸಿಎಸ್‌ಕೆ ವಿರುದ್ಧ ಜಿಟಿ ಫೈನಲ್ಸ್ ಪಂದ್ಯ ನಡೆಯುತ್ತಿದೆ.
ಸಿಎಸ್‌ಕೆ ತಂಡದ ಸ್ಟಾರ್ ಆಟಗಾರ ಅಂಬಾಟಿ ರಾಯುಡು ನಿವೃತ್ತಿ ಘೋಷಿಸಿದ್ದು, ಸಿಎಸ್‌ಕೆ ಅಭಿಮಾನಿಗಳಿಗೆ ಶಾಕ್ ಆಗಿದೆ.
2018 ರಿಂದ ಸಿಎಸ್‌ಕೆ ಜೊತೆಯಿರುವ ರಾಯುಡು ಕಳೆದ ಸೀಸನ್‌ನಲ್ಲೇ ನಿವೃತ್ತಿ ಘೋಷಿಸಿದ್ದರು. ಆದರೆ ಸಿಎಸ್‌ಕೆ ಫ್ರಾಂಚೈಸಿ ಅವರ ಮನವೊಲಿಸಿ ಆಟ ಆಡಿಸಿತ್ತು. ಆದರೆ ಈ ಬಾರಿ ಇದೇ ನನ್ನ ಕೊನೆ ಪಂದ್ಯ ಎಂದು ರಾಯುಡು ಘೋಷಿಸಿದ್ದಾರೆ.