HEALTHY FOOD | ಚಪಾತಿ ಪ್ರಿಯರೇ…ಇದನ್ನಂತೂ ಮಿಸ್‌ ಮಾಡ್ಕೋಬೇಡಿ

ನೀವು ಚಪಾತಿ ಪ್ರಿಯರೇ…? ಹಾಗಾದ್ರೆ ಈ ಸ್ಟೋರಿನ ಮಿಸ್‌ ಮಾಡ್ದೆ ಓದಿ.

ಕೆಲವರಿಗೆ ಚಪಾತಿಯಿಲ್ಲದೆ ದಿನ ಕಳೆಯುವುದೇ ಇಲ್ಲ. ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ, ಸಂಜೆಯ ತಿಂಡಿ, ರಾತ್ರಿಯ ಊಟ…ಎಲ್ಲ ಸಂದರ್ಭದಲ್ಲೂ ಚಪಾತಿ ಬೇಕೇ ಬೇಕು. ಹಾಗಾದ್ರೆ ಈ ಚಪಾತಿ ಆರೋಗ್ಯಕ್ಕೆ ಪೂರಕವೇ? ಮಾರಕವೇ? ಈ ಅಂಶ ತಿಳಿಯುವುದು ಬಹು ಮುಖ್ಯ.

ರುಚಿ ರುಚಿಯಾದ, ಬಿಸಿ ಬಿಸಿಯಾದ ಚಪಾತಿ ಕಂಡೊಡನೆ ಬಾಯಲ್ಲಿ ನೀರೂರುತ್ತೆ. ಒಂದೇ ಪೆಟ್ಟಿಗೆ ಐದಾರು ಚಪಾತಿ ಸೇವಿಸುವವರೂ ಇದ್ದಾರೆ. ಇದು ಉತ್ತಮ ಆರೋಗ್ಯದ ಲಕ್ಷಣವಲ್ಲ. ಚಪಾತಿಯಲ್ಲಿ ಕ್ಯಾಲೋರಿ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಅತಿಯಾದ ಚಪಾತಿ ಸೇವನೆ ಉತ್ತಮವಲ್ಲ. ಮಹಿಳೆಯರು ಮಧ್ಯಾಹ್ನ ಎರಡು ಹಾಗೂ ರಾತ್ರಿ ಎರಡು ಚಪಾತಿ ಸೇವಿಸಬಹುದು.

ಪುರುಷರು ದಿನಕ್ಕೆ ಎಂಟು ಚಪಾತಿಯ ತನಕ ಸೇವಿಸಲು ತೊಂದರೆಯಿಲ್ಲ. ಮಧ್ಯಾಹ್ನ ಹಾಗೂ ರಾತ್ರಿ ತಲಾ ನಾಲ್ಕರಂತೆ ಎಂಟು ಚಪಾತಿ ಸೇವಿಸಬಹುದು. ಚಪಾತಿ ನಿಧಾನವಾಗಿ ಜೀರ್ಣವಾಗುತ್ತದೆ. ಅತಿಯಾದ ಚಪಾತಿ ಸೇವನೆಯಿಂದಾಗಿ ದೇಹದಲ್ಲಿ ಸಕ್ಕರೆ ಪ್ರಮಾಣದ ಏರಿಕೆಯಾಗುವ ಸಂಭವವೂ ಇರುತ್ತದೆ. ಚಪಾತಿ ಸೇವಿಸಿದ ತಕ್ಷಣ ಮಲಗುವುದು ಉತ್ತಮ ಲಕ್ಷಣವಲ್ಲ.

ಚಪಾತಿ ತಿನ್ನುವವರು ಕನಿಷ್ಠ ಅರ್ಧಗಂಟೆಗಳ ಕಾಲ ವಾಕಿಂಗ್‌ ಹವ್ಯಾಸ ರೂಢಿಸಲೇ ಬೇಕು. ಇದರಿಂದ ಚಪಾತಿ ಜೀರ್ಣವಾಗಿ ದೇಹಾರೋಗ್ಯ ಉತ್ತಮವಾಗುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!