ಬೇಹುಗಾರಿಕೆ ಸೌಲಭ್ಯ ನಿರ್ಮಿಸಲು ಚೀನಾಕ್ಕೆ ಅವಕಾಶ ಕೊಟ್ಟಿದ್ಯಾ ಕ್ಯೂಬಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಗ್ನೇಯ ಯುಎಸ್‌ನಾದ್ಯಂತ ಎಲೆಕ್ಟ್ರಾನಿಕ್ ಸಂವಹನಗಳನ್ನು ಕದ್ದಾಲಿಕೆ ಮಾಡಲು ಚೀನಿಯರು ದ್ವೀಪದಲ್ಲಿ ಕಣ್ಗಾವಲು ಸೌಲಭ್ಯವನ್ನು ನಿರ್ಮಿಸಲು ಕ್ಯೂಬಾ ಒಪ್ಪಿಕೊಂಡಿದೆ ಎಂದು ಅಮೆರಿಕ ಗುಪ್ತಚರ ಮೂಲಗಳು ತಿಳಿಸಿರುವುದಾಗಿ ಸಿಎನ್‌ಎನ್‌ ವರದಿ ಮಾಡಿದೆ.

ಆದರೆ ಕ್ಯೂಬಾದ ಉಪ ವಿದೇಶಾಂಗ ಸಚಿವ ಕಾರ್ಲೋಸ್ ಫೆರ್ನಾಂಡಿಸ್ ಡಿ ಕೊಸ್ಸಿಯೊ ಈ ವರದಿಗಳನ್ನು ನಿರಾಕರಿಸಿದ್ದಾರೆ.
ಯುಎಸ್ ಎಲೆಕ್ಟ್ರಾನಿಕ್ ಸಂವಹನಗಳ ಮೇಲೆ ಕಣ್ಣಿಡಲು ಚೀನಾ ಪ್ರಯತ್ನಿಸುತ್ತಿರುವುದು ಇದು ಮೊದಲ ಬಾರಿಗೆ ಅಲ್ಲ. ಫೆಬ್ರವರಿಯಲ್ಲಿ ಶಂಕಿತ ಚೀನೀ ಪತ್ತೇದಾರಿ ಬಲೂನ್ ಸಿಗ್ನಲ್ ಗುಪ್ತಚರವನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಂಬಲಾಗಿತ್ತು. ಕೊನೆಗೆ ಅದನ್ನು ಶೂಟ್ ಮಾಡುವ ಮೂಲಕ ನಾಶಗೊಳಿಸಲಾಯಿತು.

ಆದರೆ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ “ಈ ವರದಿ ನಿಖರವಾಗಿಲ್ಲ” ಎಂದು ತಳ್ಳಿಹಾಕಿದ್ದಾರೆ. ಈ ವರದಿಯನ್ನಿಟ್ಟುಕೊಂಡು ಏನನ್ನೂ ಮಾತನಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಜೊತೆಗೆ ಕ್ಯೂಬಾದ ಉಪ ವಿದೇಶಾಂಗ ಸಚಿವ ಕಾರ್ಲೋಸ್ ಫೆರ್ನಾಂಡಿಸ್ ಡಿ ಕೊಸ್ಸಿಯೊ ಕೂಡ ಈ ಸುದ್ದಿ ಸಂಪೂರ್ಣವಾಗಿ ಸುಳ್ಳು ಮತ್ತು ಅಪವಾದ ಮಾತ್ರ ಎಂದು ಆರೋಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!