ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಇರಾಕ್‌ನ ಕಿರ್ಕುಕ್‌ ನಗರದಲ್ಲಿ ಕರ್ಫ್ಯೂ ಜಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕುರ್ದಿಶ್ ಮತ್ತು ಅರಬ್ ನಿವಾಸಿಗಳ ನಡುವಿನ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದು, ಇರಾಕಿನ ಕಿರ್ಕುಕ್ ನಗರದಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಹಿಂಸಾಚಾರದ ವೇಳೆ ನಾಗರಿಕರ ಪ್ರಾಣಹಾನಿ ಜೊತೆಗೆ ಎಂಟು ಮಂದಿ ಗಾಯಗೊಂಡ ಹಿನ್ನೆಲೆಯಲ್ಲಿ ಕರ್ಫ್ಯೂ ವಿಧಿಸಲಾಗಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.

ಇರಾಕ್‌ನ ಪ್ರಧಾನಿ ಮೊಹಮ್ಮದ್ ಶಿಯಾ ಅಲ್-ಸುಡಾನಿ ಅವರು ಕಿರ್ಕುಕ್‌ನಲ್ಲಿ ಕರ್ಫ್ಯೂ ಮತ್ತು ಗಲಭೆ ಪೀಡಿತ ಪ್ರದೇಶಗಳಲ್ಲಿ ವ್ಯಾಪಕ ಭದ್ರತಾ ಕಾರ್ಯಾಚರಣೆ ನಡೆಸುವಂತೆ ಆದೇಶಿಸಿದ್ದಾರೆ.

ಸ್ಥಳೀಯ ಇರಾಕಿನ ಭದ್ರತಾ ಪಡೆಗಳ ಪ್ರಧಾನ ಕಛೇರಿಯನ್ನು ಕುರ್ದಿಸ್ತಾನ್ ಡೆಮಾಕ್ರಟಿಕ್ ಪಾರ್ಟಿ (ಕೆಡಿಪಿ)ಗೆ ಹಸ್ತಾಂತರಿಸಿದ ನಂತರ ಹಿಂಸಾಚಾರ ಘಟನೆಗಳು ನಡೆಯುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!