ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದ್ಯ ಹೊಸ ನ್ಯಾಷನಲ್ ಕ್ರಶ್ ಆಗಿರುವ ನಟಿ ತೃಪ್ತಿ ದಿಮ್ರಿಗೆ ಮದುವೆಯೇ ಆಗೋದಿಲ್ವಂತೆ! ಹೀಗೆಂದು ಹೇಳಿದ್ದು ಯಾವ ಜ್ಯೋತಿಷಿಯೂ ಅಲ್ಲ, ಜನರು!
ಹೌದು, ನಟಿ ತೃಪ್ತಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಂತರ ಸಾಕಷ್ಟು ಸಿನಿಮಾಗಳಲ್ಲಿ ನಟನೆ ಮಾಡಿದ್ರೂ ಅಷ್ಟಾಗಿ ಹೆಸರು ಮಾಡಲಿಲ್ಲ. ಆದರೆ ಅವರಿಗೆ ನೇಮ್ ಫೇಮ್ ಕೊಟ್ಟಿದ್ದು, ಅನಿಮಲ್ ಸಿನಿಮಾ. ಬಾಲಿವುಡ್‌ಗೆ ಎಂಟ್ರಿ ಕೊಟ್ಟಾಗ ಇಲ್ಲಿನ ಲೈಫ್‌ಸ್ಟೈಲ್ ನೋಡಿ ತೃಪ್ತಿ ಹೈರಾಣಾಗಿದ್ದರಂತೆ.
ನಲವತ್ತು ಐವತ್ತು ಜನರಿರುವ ಹಾಲ್‌ನಲ್ಲಿ ಇರಬೇಕಿತ್ತಂತೆ, ಮಗಳನ್ನು ಬಾಲಿವುಡ್‌ಗೆ ಕಳುಹಿಸಿದ್ದಕ್ಕೆ ತೃಪ್ತಿ ಪೋಷಕರಿಗೆ ನೆಂಟರು, ಜನರು ಎಲ್ಲರೂ ಅವಳಿಗೆ ಮದುವೆ ಆಗೋದಿಲ್ಲ. ಸಿನಿಮಾ ಮಂದಿನಾ ಯಾರೂ ಇಷ್ಟಪಡೋದಿಲ್ಲ ಎಂದು ಹೇಳಿದ್ದರಂತೆ.
ಐರನಿ ಏನೆಂದರೆ ಸದ್ಯ ತೃಪ್ತಿ ಕೈಯಲ್ಲಿ ಬೇಕಾದಷ್ಟು ಸಿನಿಮಾಗಳಿವೆ, ಅಷ್ಟೇ ಅಲ್ಲದೆ ಅವರನ್ನು ಮದುವೆಯಾಗೋಕೆ ನೂರಾರು ಮಂದಿ ಕ್ಯೂ ನಿಂತಿದ್ದಾರೆ. ಸಾಧನೆ ಮಾಡೋದು ಕಷ್ಟ, ಮಾಡಿದ ನಂತರ ಈ ರೀತಿ ಕಮೆಂಟ್‌ಗಳು ತಮಾಷೆಯಾಗಿ ಉಳಿಯುತ್ತವಷ್ಟೇ!