ಸೈಬರ್‌ ಕಳ್ಳರೇ ಎಚ್ಚರ! ರಾಜ್ಯದಲ್ಲಿ ಶುರುವಾಗತ್ತಿದೆ ಹೊಸ ‘ಸೈಬರ್‌ ತನಿಖಾ ಘಟಕ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೈಬರ್‌ ಅಪರಾಧ ಕೃತ್ಯಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಪ್ರತ್ಯೇಕ ಸೈಬರ್‌ ತನಿಖಾ ಘಟಕಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಘಟಕದ ಮುಖ್ಯಸ್ಥರಾಗಿ ಪ್ರಣವ್ ಮೊಹಂತಿ ಅವರಿಗೆ ಹೊಣೆಗಾರಿಕೆ ನೀಡಲಾಗಿದ್ದು, ಈ ಬಗ್ಗೆ ಅಧಿಕೃತ ಆದೇಶ ಹೊರ ಬೀಳಬೇಕಿದೆ.

ಸೈಬರ್‌ ತನಿಖಾ ಘಟಕಕ್ಕೆ ಸ್ಥಾಪನೆಗೆ 272 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪೊಲೀಸ್ ಇಲಾಖೆ ಕೋರಿಕೆ ಸಲ್ಲಿಸಿದೆ. ಇದರಲ್ಲಿ ಸೈಬರ್‌ಲ್ಯಾಬ್, ತಾಂತ್ರಿಕ ಉಪಕರಣಗಳ ಖರೀದಿಗೆ ನೆರವು ಕೋರಲಾಗಿದೆ. ಆದರೆ ಮೊದಲ ಹಂತದಲ್ಲಿ ಘಟಕಕ್ಕೆ ಕೇವಲ 5 ಕೋಟಿ ಮಾತ್ರ ಬಿಡುಗಡೆಗೆ ಸರ್ಕಾರ ಸಮ್ಮಿತಿಸಿದೆ.

ಈ ಘಟಕದ ಡಿಐಜಿಯಾಗಿ ಭೂಷಣ್ ಬೊರೆಸೆ ಅವರು ನೇಮಕಗೊಂಡಿದ್ದು, ಹಂತ ಹಂತವಾಗಿ ಐಜಿಪಿ ಹಾಗೂ ಎಸ್ಪಿ ಸೇರಿದಂತೆ ಅಧಿಕಾರಿ-ಸಿಬ್ಬಂದಿ ನಿಯೋಜಿಸಲು ಸರ್ಕಾರ ಮುಂದಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!