ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆಯರ ಸಬಲೀಕರಣಕ್ಕಾಗಿ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಮಹಿಳೆಯರಿಂದ ಸೈಕಲ್ ರ್ಯಾಲಿ ನಡೆಸಲಾಗಿದೆ. ದೇಶದ ವಿವಿಧ ಭಾಗಗಳಿಂದ 140 ಕ್ಕೂ ಹೆಚ್ಚು ಮಹಿಳಾ ಸೈಕ್ಲಿಸ್ಟ್‌ಗಳು ಭಾನುವಾರ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಿಂದ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಕಾಮನ್ ಅಮನ್ ಸೇತು (ಶಾಂತಿಯ ಸೇತುವೆ) ವರೆಗೆ ಸೈಕಲ್ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಕಾಶ್ಮೀರ ಕಣಿವೆಯಾದ್ಯಂತ ಮಹಿಳಾ ಸಬಲೀಕರಣವನ್ನು ಉತ್ತೇಜಿಸಲು ಭಾರತೀಯ ಸೇನೆಯು ಈ ರ್ಯಾಲಿಯನ್ನು ನಡೆಸಿದೆ ಎಂದು ಮೂಲಗಳು ವರದಿ ಮಾಡಿವೆ.
ರ್ಯಾಲಿಯು 65 ಕಿಲೋಮೀಟರ್‌ಗಳನ್ನು ಕ್ರಮಿಸಿದ್ದು, ಬಾರಾಮುಲ್ಲಾದ ಶೋಕತ್ ಅಲಿ ಸ್ಟೇಡಿಯಂನಿಂದ ಪ್ರಾರಂಭವಾಗಿ ಉರಿಯ ಕಮಾನ್ ಪೋಸ್ಟ್‌ನಲ್ಲಿ ಮುಕ್ತಾಯಗೊಂಡಿದೆ.
ಕಾಶ್ಮೀರದ ವಿವಿಧ ಶಾಲೆಗಳು ಮತ್ತು ಕ್ಲಬ್‌ಗಳಿಂದ ಉತ್ತಮ ಸಂಖ್ಯೆಯ ಮಹಿಳಾ ಸೈಕ್ಲಿಸ್ಟ್‌ಗಳು ಸಹ ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಈ ಕುರಿತು ಸೇನೆಯ ಡಾಗರ್ ವಿಭಾಗದ ಜನರಲ್ ಆಫೀಸರ್ ಕಮಾಂಡರ್ (ಜಿಒಸಿ) ಅಜಯ್ ಚಾನ್‌ಪುರಿಯಾ ಮಾತನಾಡಿ “ಮಹಿಳೆಯರಿಗಾಗಿಯೇ ಸೈಕ್ಲಿಂಗ್ ರ್ಯಾಲಿಯನ್ನು ನಡೆಸುವಂತೆ ಕಾಶ್ಮೀರದ ಮಹಿಳೆಯರ ಪರವಾಗಿ ನಾವು ವಿನಂತಿಸಿದ್ದೇವೆ” ಎಂದು ಹೇಳಿದ್ದಾರೆ.
ಇದು ಕಾಶ್ಮೀರದಲ್ಲಿ ಮಹಿಳೆಯರ ಸೈಕಲ್ ರ್ಯಾಲಿಯ ಎರಡನೇ ವರ್ಷವಾಗಿದ್ದು ಕಳೆದ ವರ್ಷದ ಯಶಸ್ಸಿನ ನಂತರ, ಭಾರತೀಯ ಸೇನೆಯು ಸ್ವಾತತ್ರ್ಯ ಅಮೃತಮಹೋತ್ಸವದ ಅಡಿಯಲ್ಲಿ ಭಾರತೀಯ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸಲು ಮೆಗಾ ರ್ಯಾಲಿಯನ್ನು ಆಯೋಜಿಸಿತ್ತು.