ಚಂಡಮಾರುತ ಅಬ್ಬರ: ಹೊಂಡುರಾಸ್ ರಾಷ್ಟ್ರಕ್ಕೆ ಭಾರತದಿಂದ ಮಾನವೀಯ ನೆರವು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

‘ಸಾರ’ ಚಂಡಮಾರುತಕ್ಕೆ ಹೊಂಡುರಾಸ್ ರಾಷ್ಟ್ರ ತತ್ತರಿಸಿದ್ದು, ಈ ಹಿನ್ನೆಲೆ ಭಾರತವು 26 ಟನ್ ಮಾನವೀಯ ನೆರವನ್ನು ರವಾನಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸಾ ಸಾಮಗ್ರಿಗಳು, ಗ್ಲುಕೋಮೀಟರ್ ಗಳು,ಆಕ್ಸಿ ಮೀಟರ್ ಗಳು, ಕೈಗವಸುಗಳು, ಸಿರಿಂಜ್ ಗಳು ಮತ್ತು ಐವಿ ದ್ರವಗಳು, ಕಂಬಳಿಗಳು, ಮಲಗುವ ಚಾಪೆಗಳು ಮತ್ತು ನೈರ್ಮಲ್ಯ ಕಿಟ್ ಗಳನ್ನು ಸೇರಿದಂತೆ ವೈದ್ಯಕೀಯ ಸರಬರಾಜು ಮತ್ತು ವಿಪತ್ತು ಪರಿಹಾರ ಸಾಮಗ್ರಿಗಳನ್ನು ಒಳಗೊಂಡ ಸರಕು ಭಾರತದಿಂದ ಹೊಂಡುರಾಸ್ ನತ್ತ ಸಾಗಿದೆ.

ಜಾಗತಿಕ ದಕ್ಷಿಣದ ರಾಷ್ಟ್ರಗಳಿಗೆ ಮೊದಲ ಪ್ರತಿಕ್ರಿಯೆಯಾಗಿ ಭಾರತದ ಪ್ರಯತ್ನಗಳು ವಿಪತ್ತು ನಿರ್ವಹಣೆ ಮತ್ತು ಪರಿಹಾರ ಕ್ಷೇತ್ರದಲ್ಲಿ ದೇಶಕ್ಕೆ ಹೆಚ್ಚಿನ ಗೌರವವನ್ನು ಗಳಿಸಿವೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!