ಚಂಡಮಾರುತದಿಂದ ಮುಂಬೈನಲ್ಲಿ ಭಾರೀ ಮಳೆ: ವಿಮಾನಗಳು ರದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅರಬ್ಬಿ ಸಮುದ್ರದಲ್ಲಿ ಬಿಪೋರ್ಜೋಯ್ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದರ ಪರಿಣಾಮ ಮುಂಬೈ ಸೇರಿದಂತೆ ಮಹಾರಾಷ್ಟ್ರದ ಹಲವೆಡೆ ಭಾರೀ ಮಳೆಯಾಗಿದೆ. ಜೋರಾದ ಗಾಳಿಯ ಜತೆಗೆ ಸಮುದ್ರದಲ್ಲಿ ಅಲೆಗಳು ಎದ್ದಿವೆ. ಚಂಡಮಾರುತದಿಂದಾಗಿ ಹಲವು ವಿಮಾನಗಳಿಗೂ ಹಾನಿಯಾಗಿದೆ. ಹವಾಮಾನ ಇಲಾಖೆ ಈಗಾಗಲೇ ಮಹಾರಾಷ್ಟ್ರಕ್ಕೆ ಎಚ್ಚರಿಕೆ ನೀಡಿದ್ದು, ಚಂಡಮಾರುತವು ಈಗ ದೇವಭೂಮಿ ದ್ವಾರಕಾದಿಂದ 380 ಕಿ.ಮೀ. ಜೂನ್ 15ಕ್ಕೆ ಗುಜರಾತ್‌ನ ಜಾಖೋವ್ ಬಂದರನ್ನು ದಾಟುವ ಸಾಧ್ಯತೆ ಇದೆ. ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಭೆ ಕರೆದಿದ್ದಾರೆ.

ಚಂಡಮಾರುತದಿಂದಾಗಿ ಭಾರತದ ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮತ್ತು ಗುಡುಗು ಸಹಿತ ಚಂಡಮಾರುತದ ಎಚ್ಚರಿಕೆ ನೀಡಲಾಗಿದೆ. ಹವಾಮಾನ ಇಲಾಖೆ ಪ್ರಕಾರ, ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿಯಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ಈ ವೇಳೆ ಮುಂಬೈನಲ್ಲಿ ಬಿರುಗಾಳಿ ಬೀಸಿದ್ದು, ಹಲವು ಮರಗಳು ಧರೆಗುರುಳಿವೆ. ಪೂರ್ವ-ಮಧ್ಯ ಅರೇಬಿಯನ್ ಸಮುದ್ರದಲ್ಲಿ ತೀವ್ರ ವಾಯು ವ್ಯವಸ್ಥೆಯು ತೀವ್ರ ಚಂಡಮಾರುತವಾಗಿ ಮಾರ್ಪಟ್ಟಿದೆ ಎಂದು ಹವಾಮಾನ ಮೇಲ್ವಿಚಾರಣಾ ಸಂಸ್ಥೆ ತಿಳಿಸಿದೆ. ಸೈಕ್ಲೋನ್ ಬಿಪರ್ಜಾಯ್ ಪ್ರಸ್ತುತ ಗಂಟೆಗೆ 9 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ.

ಅನೇಕ ವಿಮಾನಗಳ ಮೇಲೆ ಪರಿಣಾಮ
ಚಂಡಮಾರುತದಿಂದಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ತಮ್ಮ ವಿಮಾನಕ್ಕಾಗಿ ಕಾಯುತ್ತಿದ್ದಾರೆ. ಅನೇಕ ವಿಮಾನಯಾನ ಸಂಸ್ಥೆಗಳು ವಿಮಾನಗಳನ್ನು ರದ್ದುಗೊಳಿಸಿವೆ. ಭಾನುವಾರ ಸಂಜೆ ಮುಂಬೈನಲ್ಲಿ ಹಲವು ವಿಮಾನಗಳು ರದ್ದಾಗಿವೆ. ಈ ನಿಟ್ಟಿನಲ್ಲಿ ಏರ್ ಇಂಡಿಯಾ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಕೆಲವು ವಿಮಾನಗಳ ವಿಳಂಬದ ಬಗ್ಗೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!