ಗುಜರಾತ್‌ನ ಕಚ್ ಕರಾವಳಿಯತ್ತ ಸಾಗುತ್ತಿರುವ ʻಬಿಪರ್ಜಾಯ್‌ʼ ಚಂಡಮಾರುತ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಿಪರ್ಜಾಯ್‌ ಚಂಡಮಾರುತ ಗುಜರಾತ್‌ನ ಕಚ್ ಕರಾವಳಿಯತ್ತ ಸಾಗುತ್ತಿದೆ. ಗುರುವಾರ ಸಂಜೆ ವೇಳೆಗೆ ಜಕೌ ಕರಾವಳಿಯನ್ನು ದಾಟಲಿದೆ. ಚಂಡಮಾರುತದ ಕರಾವಳಿ ದಾಟುವ ಸಮಯದಲ್ಲಿ ಗಂಟೆಗೆ 150 ಕಿಮೀ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿದೆ.

ಕಚ್ ಮತ್ತು ಥಲಕಾ ಪ್ರದೇಶದ 12,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಪಶ್ಚಿಮ ರೈಲ್ವೆಯು ಗುಜರಾತ್‌ನ ಕರಾವಳಿಯಲ್ಲಿ 56 ರೈಲುಗಳನ್ನು ರದ್ದುಗೊಳಿಸಿದೆ. ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ. ಬಂದರುಗಳಿಂದ ಹಡಗು ಮತ್ತು ಲಾರಿಗಳು ಖಾಲಿಯಾದವು.

ಮೀನುಗಾರಿಕೆ ಸ್ಥಗಿತಗೊಂಡಿದ್ದು, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಭೂಸೇನೆ, ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್‌ನ ಬೆಂಬಲ ತಂಡಗಳು ಸ್ಥಳದಲ್ಲಿ ಬೀಡುಬಿಟ್ಟಿವೆ. ಭಾರತ ಮತ್ತು ಪಾಕಿಸ್ತಾನದ ಪಶ್ಚಿಮ ಕರಾವಳಿಯಲ್ಲಿ ಚಂಡಮಾರುತದ ಪ್ರಭಾವ ತೀವ್ರವಾಗಿರುತ್ತದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!