ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಪೈಪ್ ಡು ಗ್ಯಾಸ್ ಬಂದರೆ ಅದರ ಗ್ಯಾಸ್ ಬೆಲೆ 450 ರಿಂದ 500 ರೂ.ಗೆ ಇಳಿಕೆಯಾಗುತ್ತದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಮ್ಮ ದೇಶದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಗ್ಯಾಸ್ ಸಿಲಿಂಡರ್ ಬೆಲೆ 1,200ಗೆ ಏರಿಕೆಯಾಗಿತ್ತು. ಅದನ್ನು ಹಂತ ಹಂತವಾಗಿ 800 ರೂ.ಗೆ ಇಳಕೆ ಮಾಡಲಾಗಿತ್ತು. ಇದೀಗ ಪುನಃ 50 ರೂ. ಹೆಚ್ಚಳ ಮಾಡಿದ್ದರಿಂದ 850ಗೆ ದರ ನಿಗದಿ ಮಾಡಲಾಗಿದೆ.
ಆದರೆ, ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಏನೆಲ್ಲಾ ಬೆಲೆ ಹೆಚ್ಚಾಗಿದೆ ಎಂಬುದರ ಅರಿವಿದೆಯಾ? ಗ್ಯಾರಂಟಿ ಹೆಸರಿನಲ್ಲಿ ಎಲ್ಲಾ ಬೆಲೆ ಜಾಸ್ತಿ ಮಾಡಿದ್ದಾರೆ. ಜನರಿಗೆ ಒಂದಾದರೂ ಕಡಮೆ ದರದಲ್ಲಿ ಸಿಗುವಂತೆ ಸಿದ್ದರಾಮಯ್ಯ ಮಾಡಿದ್ದಾರಾ? ಸಿದ್ದರಾಮಯ್ಯ ಸರಕಾರ ಲೂಟಿ ಹೊಡೆಯುತ್ತಾ ಎಲ್ಲದರಲ್ಲೂ ಸುಲಿಗೆ ಮಾಡುತ್ತಿದೆ. ಡಿಕೆ ಶಿವಕುಮಾರ್ ಬ್ರ್ರಾಂಡ್ ಬೆಂಗಳೂರು ಮಾಡ್ತಿನಿ ಅಂತಾ ಗುಂಡಿ ಬೆಂಗಳೂರು ಮಾಡಿದ್ದೀರಿ ಎಂದು ಕಿಡಿಕಾರಿದರು.