ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಇಡೀ ಮನೆ ಕುಸಿದಿದೆ. ಅಡುಗೆ ಮನೆಯಲ್ಲಿದ್ದ ಅಣ್ಣ ತಂಗಿ ಮೃತಪಟ್ಟಿದ್ದಾರೆ.
ಲಹರ್ತಾರಾ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದ್ದು, 30 ವರ್ಷದ ವ್ಯಕ್ತಿ ಮತ್ತು ಅವರ ತಂಗಿ ಮೃತಪಟ್ಟಿದ್ದಾರೆ. ಇಡೀ ಮನೆ ಕುಸಿದಿದ್ದು, ಅವಶೇಷಗಳಿಂದ ಮೃತದೇಹಗಳು ಹಾಗೂ ಗಾಯಗೊಂಡವರನ್ನು ಹೊರಕ್ಕೆ ತೆಗೆಯಲಾಗಿದೆ.
ತಾಯಿ ಗಿರಿಜಾ ದೇವಿ, ಹಾಗೂ ಒಬ್ಬ ಪುತ್ರ ಗಾಯಗೊಂಡಿದ್ದರೆ, ಅಮನ್ ಚೌಧರಿ ಹಾಗೂ ಮಗಳು ಪ್ರೀತಿ ಮೃತಪಟ್ಟಿದ್ದಾರೆ. ರಾತ್ರಿಯಿಡೀ ಗ್ಯಾಸ್ ಸೋರಿಕೆಯಾಗಿದೆ. ಆದರೆ ಅದನ್ನು ಯಾರೂ ಗಮನಿಸಿಲ್ಲ.
ಬೆಳಗ್ಗೆ ಗಿರಿಜಾ ದೇವಿ ಸ್ಟೋವ್ ಹಚ್ಚಲು ಹೋದಾಗ ಸ್ಫೋಟ ಸಂಭವಿಸಿದೆ. ಅಡುಗೆ ಮನೆಯಲ್ಲಿದ್ದ ಅಮನ್ ಹಾಗೂ ಪ್ರೀತಿ ಮೃತಪಟ್ಟಿದ್ದಾರೆ.



