spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 27, 2022

Latest Posts

ಸಿಲಿಂಡರ್ ತುಂಬಿದ್ದ ಟೆಂಪೋ ಪಲ್ಟಿ :ಬೈಕ್ ಸವಾರನಿಗೆ ಗಂಭೀರ ಗಾಯ

ಹೊಸದಿಗಂತ ವರದಿ ರಾಮನಗರ:
ಸಿಲಿಂಡರ್‌ ತುಂಬಿಕೊಂಡು ಹೋಗುತ್ತಿದ್ದ ವಾಹನವೊಂದು ಪಲ್ಟಿಯಾಗಿ ಬೈಕ್‌ ಸವಾರನ ಮೇಲೆ ಬಿದ್ದು ಆತ ಗಂಭೀರವಾಗಿ ಗಾಯ ಗೊಂಡಿರುವ ಘಟನೆ ರಾಮನಗರದಲ್ಲಿ ನಡೆದಿದೆ.

ರಾಮನಗರ ತಾಲೂಕಿನ ಪಾದರಹಳ್ಳಿ ಗ್ರಾಮದ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ. ಗ್ಯಾಸ್​ ಸಿಲಿಂಡರ್​ಗಳನ್ನು ತುಂಬಿಕೊಂಡು ಹೊರಟಿದ್ದ ಈ ಟೆಂಪೋ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಅದೇ ಸಂದರ್ಭದಲ್ಲಿ ಸಾಗುತ್ತಿದ್ದ ಬೈಕ್​ ಮೇಲೂ ಸಿಲಿಂಡರ್​ ಬಿದ್ದಿದ್ದು, ಸವಾರ ಮಂಜುನಾಥ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ.
ಮಾಗಡಿಯಿಂದ ರಾಮನಗರಕ್ಕೆ ಸಾಗುತ್ತಿದ್ದ ಈ ವಾಹನದಲ್ಲಿ ಸುಮಾರು 50 ಭಾರತ್ ಗ್ಯಾಸ್ ಸಿಲಿಂಡರ್​ಗಳಿದ್ದು, ಭಾರಿ ಅನಾಹುತವೊಂದು ತಪ್ಪಿಹೋಗಿದೆ. ಸಿಲಿಂಡರ್​​ ಸ್ಫೋಟಗೊಂಡಿದ್ದರೆ ಭೀಕರ ಅಗ್ನಿದುರಂತ ಸಂಭಿಸುವ ಸಾಧ್ಯತೆ ಇತ್ತು. ಸ್ಥಳಕ್ಕೆ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap