September 27, 2026
Sunday, September 27, 2026
spot_img

ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಲೆಂದು ಚಪ್ಪಲಿ ತ್ಯಜಿಸಿದ ಅಭಿಮಾನಿ

ಹೊಸ ದಿಗಂತ ವರದಿ,ಮಂಡ್ಯ :

ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವವರೆಗೆ ಚಪ್ಪಲಿ ಧರಿಸುವುದಿಲ್ಲ ಎಂದು ಅವರ ಅಭಿಮಾನಿಯೊಬ್ಬ ಹರಕೆ ಹೊತ್ತು, ಕಳೆದ ಆರು ತಿಂಗಳುಗಳಿಂದಲೂ ಚಪ್ಪಲೆ ಹಾಕದೆ ಓಡಾಡುತ್ತಿರುವುದು ಮದ್ದೂರಿನಲ್ಲಿ ಕಂಡುಬಂದಿದೆ.

ಆರು ತಿಂಗಳುಗಳಿಂದ ಓಡಾಟ

ಮದ್ದೂರಿನ ಎಳನೀರು ವ್ಯಾಪಾರಿ ಅಶೋಕ್ ಎಂಬ ಡಿ.ಕೆ. ಶಿವಕುಮಾರ್ ಅಭಿಮಾನಿ ಕಳೆದ ಆರು ತಿಂಗಳುಗಳಿಂದಲೂ ಕಾಲಿಗೆ ಚಪ್ಪಲಿ ಧರಿಸದೆ ಹಾಗೆಯೇ ಓಡಾಡಿಕೊಂಡಿದ್ದಾರೆ. ಆ ತಿಂಗಳ ಹಿಂದೆ ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಸ್ಥಾನವನ್ನು ಸಿದ್ದರಾಮಯ್ಯ ಬಿಟ್ಟುಕೊಡದ ಕಾರಣ ಅಶೋಕ್ ಅವರು ಮದ್ದೂರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹರಕೆ ಹೊತ್ತಿದ್ದರು.

ಮದ್ದೂರಮ್ಮನ ಸನ್ನಿಧಿಯಲ್ಲಿ ಹರಕೆ ಹೊತ್ತ ಅಶೋಕ್ ಅಂದಿನಿಂದ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವವರೆಗೆ ಚಪ್ಪಲಿ ತೊಡುವುದಿಲ್ಲ ಎಂದುಕೊಂಡಿದ್ದರು. ಇದೀಗ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವ ಕಾಲ ಸನ್ನಿಹಿತವಾಗಿದೆ.

Must Read