ಹೊಸದಿಗಂತ ಡಿಜಿಟಲ್ ಡೆಸ್ಕ್
ನಿನ್ನೆಯಷ್ಟೇ ಮುಂಬೈನಲ್ಲಿ 2008ರ ನವೆಂಬರ್ 26ರಂದು ನಡೆದ ಉಗ್ರದಾಳಿಯ ಮಾಸ್ಟರ್ ಮೈಂಡ್, ಲಷ್ಕರ್ ಈ ತೈಬಾ ಉಗ್ರ ಸಂಘಟನೆಯ ಸಂಸ್ಥಾಪಕ ಹಫೀಜ್ ಸಯೀದ್ಗೆ
31 ವರ್ಷ ಜೈಲು ಶಿಕ್ಷೆ ಘೋಷಣೆಯಾಗಿದ್ದು, ಇದರ ಬೆನ್ನೆಲ್ಲೇ ಮತ್ತೊಂದು ಘೋಷಣೆ ಹೊರಬಿದ್ದಿದ್ದು, ಮಗನಿಗೆ ಭಯೋತ್ಪಾದಕ ಪಟ್ಟ ಆದೇಶವನ್ನು ಕೇಂದ್ರ ಗೃಹ ಸಚಿವಾಲಯ ಹೊರಡಿಸಿದೆ.
ಲಷ್ಕರ್ ಈ ತೈಬಾ ಉಗ್ರ ಸಂಘಟನೆಯ ಸಂಸ್ಥಾಪಕ ಹಫೀಜ್ ಸಯೀದ್ಗೆ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ನಿನ್ನೆಯಷ್ಟೇ 31 ವರ್ಷಗಳ ಜೈಲುಶಿಕ್ಷೆ ವಿಧಿಸಿ ತೀರ್ಪನ್ನು ನೀಡಿತ್ತು.
ಇದರ ಬೆನ್ನಿಗೇ ಭಾರತದ ಕೇಂದ್ರ ಗೃಹ ಸಚಿವಾಲಯವು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ 1967ರ ಅನ್ವಯ ಹಫೀಜ್ ಸಯೀದ್ ಪುತ್ರ ಹಫೀಜ್ ತಲ್ಹಾ ಘೋಷಿತ ಉಗ್ರ ಎಂದು ನಿರ್ಣಯ ಹೊರಡಿಸಿದೆ.
ಹಫೀಜ್ ತಲ್ಹಾ ಉಗ್ರ ಸಂಘಟನೆ ಲಷ್ಕರ್ ಈ ತೈಬಾದ ಹಿರಿಯ ನಾಯಕನಾಗಿದ್ದು, ಈತ ಭಾರತದಲ್ಲಿ ಉಗ್ರ ದಾಳಿಯನ್ನು ನಿರ್ವಹಿಸುವ, ಯೋಜಿಸುವ, ಅದಕ್ಕಾಗಿ ನೇಮಕಾತಿ ಹಾಗೂ ಹಣ ಸಂಗ್ರಹದಂಥ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ವಿವರಣೆ ನೀಡಿ ಉಗ್ರ ಎಂಬುದನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.