ಮಸೀದಿಯಲ್ಲಿ ದೇಶ ವಿರೋಧಿ, ಪ್ರಚೋದನಕಾರಿ ಘೋಷಣೆ : 13 ಮಂದಿ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಜಮ್ಮು ಮತ್ತು ಕಾಶ್ಮೀರದ ಜಾಮಿಯಾ ಮಸೀದಿಯೊಳಗೆ ದೇಶ ವಿರೋಧಿ ಮತ್ತು ಪ್ರಚೋದನಕಾರಿ ಘೋಷಣೆಗಳಿಗೆ ಸಂಬಂಧಿಸಿದಂತೆ ಒಟ್ಟು 13 ಜನರನ್ನು ಬಂಧಿಸಿದ್ದಾರೆ.
ಶ್ರೀನಗರ ಪೊಲೀಸರು ನಿನ್ನೆ ಜಾಮಿಯಾ ಮಸೀದಿ ಆವರಣದಲ್ಲಿ ಗೂಂಡಾಗಿರಿ ಮತ್ತು ದೇಶ ವಿರೋಧಿ ಘೋಷಣೆ ಕೂಗಿದ ಪ್ರಕರಣದಲ್ಲಿ ಬಂಧಿತ 13 ಆರೋಪಿಗಳ ಚಿತ್ರಗಳನ್ನು ಬಿಡುಗಡೆ ಮಾಡಿದ್ದರು.
ದೇಶ ವಿರೋಧಿ ಘೋಷಣೆಗಳನ್ನು ಕೂಗಿದ ಯುವಕರು ಪೊಲೀಸರು ಮತ್ತು ಕೆಲವರ ಆಕ್ಷೇಪದ ಬಳಿಕ 2-3 ನಿಮಿಷಗಳಲ್ಲಿ ಸ್ಥಳದಿಂದ ಪಲಾಯನ ಗೈದಿದ್ದರು.
ಇದು ಜಾಮಿಯಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಗೆ ಅಡ್ಡಿಪಡಿಸಿ, ಹಾಜರಾದವರನ್ನು ಪ್ರಚೋದಿಸುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡಲು ಪಾಕಿಸ್ಥಾನಿ ಭಯೋತ್ಪಾದಕ ಸಂಘಟನೆಗಳ ನಿರ್ವಾಹಕರಿಂದ ಉತ್ತಮ ಯೋಜಿತ ಸಂಚಿನ ಭಾಗವಾಗಿದೆ ಎಂಬುದು ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ’ ಎಂದು ಪೊಲೀಸ್ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಇನ್ನೂ ಹಲವು ಶಂಕಿತ ವ್ಯಕ್ತಿಗಳನ್ನು ಪರೀಕ್ಷಿಸಲಾಗುತ್ತಿದ್ದು, ಈ ಪ್ರಕರಣದಲ್ಲಿ ಅವರ ಪಾತ್ರ ಸ್ಪಷ್ಟವಾಗಿ ಬಂದ ತಕ್ಷಣ ಔಪಚಾರಿಕವಾಗಿ ಬಂಧಿಸಲಾಗುವುದು. ಈ ಎಲ್ಲಾ ಆರೋಪಿಗಳ ಪಿಎಸ್‌ಎ ದಾಖಲೆಗಳನ್ನು ಪಿಎಸ್‌ಎ ಕಾಯ್ದೆಯಡಿಯೂ ದಾಖಲಿಸಲು ಸಿದ್ಧಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!