ಒಂದಲ್ಲಾ, ಎರಡಲ್ಲಾ ಸ್ಕೂಟರ್‌ನಲ್ಲಿ ಏಳು ಮಕ್ಕಳ ಕರೆದೊಯ್ದ ಅಪ್ಪ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಕೂಟರ್‌ನಲ್ಲಿ ಇಬ್ಬರು, ಮೂವರು ಮಕ್ಕಳನ್ನು ಕರೆದುಕೊಂಡು ಹೋಗುವ ದೃಶ್ಯ ನೋಡಿದಾಗ ಇದು ಸೇಫ್ ಅಲ್ಲ ಎನ್ನುವ ಫೀಲಿಂಗ್ ಎಲ್ಲರಿಗೂ ಬರುವಂಥದ್ದೇ, ಆದರೆ ಇಲ್ಲೊಬ್ಬ ತಂದೆ ಏಳು ಮಕ್ಕಳನ್ನು ಸ್ಕೂಟಿಯಲ್ಲಿ ಕರೆದುಕೊಂಡು ಹೋಗಿದ್ದಾನೆ.

ಮುಂಬೈನಲ್ಲಿ ಮುನವ್ವರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ನಾಲ್ವರು ಮುನವ್ವರ್ ಮಕ್ಕಳು, ಇನ್ನು ಮೂವರು ನೆರೆ ಮನೆಯ ಮಕ್ಕಳಾಗಿದ್ದಾರೆ. ಏಳು ಮಕ್ಕಳನ್ನು ಕೂರಿಸಿಕೊಂಡು ಸ್ಕೂಟಿಯಲ್ಲಿ ಓಡಾಡಿದ್ದನ್ನು ಗಮನಿಸಿದ ಜನರು ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ನಂತರ ಪೊಲೀಸರು ಮುನವ್ವರ್ ವಿರುದ್ಧ ಎಫ್‌ಆರ್ ದಾಖಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!