ದಿನಭವಿಷ್ಯ | ಅನಿರೀಕ್ಷಿತ ವಲಯದಿಂದ ಧನ ಲಾಭ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಮೇಷ

ಆರ್ಥಿಕವಾಗಿ ನಿಮಗೆ ಪೂರಕ ದಿನ. ಅನಿರೀಕ್ಷಿತ ವಲಯದಿಂದ ಧನ ಲಾಭ. ನೆರೆಕರೆಯವರಿಂದ ಕಿರಿಕಿರಿ ಎದುರಿಸುವಿರಿ

ವೃಷಭ
ನಿಮ್ಮ ಆಪ್ತರ ಮುಖದಲ್ಲಿ ನಗು ಅರಳಿಸಲು ನಿಮ್ಮ ಕೈಲಾದದ್ದನ್ನು ಮಾಡಿ.ಸಂಘರ್ಷವನ್ನು ತಪ್ಪಿಸಿ. ಖರ್ಚು ತುಸು ಹೆಚ್ಚಬಹುದು.

ಮಿಥುನ
ಕೆಲವರು ನಿಮ್ಮ ನೆರವು ಕೇಳಿ ಬರಬಹುದು. ನೆರವು  ನೀಡುವಲ್ಲಿ ಮಿತಿ ಇರಲಿ. ಆರೋಗ್ಯದ ವಿಷಯ ತುಸು ಚಿಂತೆಗೆ ಕಾರಣವಾದೀತು. ಆರ್ಥಿಕ ಸಂಕಷ್ಟ.

ಕಟಕ
ಸಂಗಾತಿಯೊಡನೆ ಸಹಕಾರ, ಸಾಮರಸ್ಯ. ವೃತ್ತಿಯಲ್ಲಿ ಪ್ರಗತಿ. ಆದಾಯ ಮತ್ತು ಖರ್ಚಿನ ಮಧ್ಯೆ ಹೊಂದಾಣಿಕೆ ಸಾಧಿಸಿ. ಆರೋಗ್ಯ ಸ್ಥಿರ.

ಸಿಂಹ
ಭವಿಷ್ಯದ ಬಗ್ಗೆ ಹೆಚ್ಚು ಗಮನಹರಿಸಿ. ಖರ್ಚುಗಳನ್ನು ನಿಯಂತ್ರಿಸಿ.ವೃತ್ತಿಯಲ್ಲಿ ವಾಗ್ವಾದಕ್ಕೆ ಇಳಿಯಬೇಡಿ. ಸಹನೆ ಕಾಯ್ದುಕೊಳ್ಳಿ.

ಕನ್ಯಾ
ಕೆಲವು ವಿಘ್ನಗಳನ್ನು ಇಂದು ಎದುರಿಸುವಿರಿ. ಆದರೆ ಅವನ್ನು ಸುಲಭದಲ್ಲಿ ಪರಿಹರಿಸುವಿರಿ. ಕೌಟುಂಬಿಕ ಪರಿಸರ ಉಲ್ಲಾಸದಾಯಕ.

ತುಲಾ
ನಿಮಗಿಂದು ಪೂರಕ ದಿನ. ಕಾರ್‍ಯ ಸಿದ್ಧಿ. ಕೆಟ್ಟು ಹೋದ ಸಂಬಂಧ ಮತ್ತೆ ಸುಧಾರಿಸುವುದು. ನಿಮ್ಮಿಂದ ದೂರವಾದವರು ಹತ್ತಿರವಾಗುವರು.

ವೃಶ್ಚಿಕ
ನಿಮ್ಮ ಇಚ್ಛೆಗಳು ಇಂದು ಸುಲಭದಲ್ಲಿ ಈಡೇರುವವು. ಕಷ್ಟವೆಂದುಕೊಂಡ ಕಾರ್‍ಯ ಸುಲಭದಲ್ಲಿ ಮುಗಿಯುವುದು. ವಿದ್ಯಾರ್ಥಿಗೆ ಯಶಸ್ಸು.

ಧನು
ಆರ್ಥಿಕವಾಗಿ ಪ್ರಗತಿ. ಪ್ರಮುಖ ಕಾರ್‍ಯವೊಂದಕ್ಕೆ ಹಣ ಕ್ರೋಢೀಕರಿಸಲು ಸಫಲವಾಗುವಿರಿ. ಆರೋಗ್ಯ ಸಮಸ್ಯೆ ಬಾಧಿಸಬಹುದು.

ಮಕರ
ಒತ್ತಡದ ದಿನ. ಆದರೆ ಎಲ್ಲ ಕಾರ್‍ಯ ಸಫಲಗೊಳಿಸಿ ಒತ್ತಡ ನಿವಾರಿಸಲು ಸಮರ್ಥರಾಗುವಿರಿ. ಆಪ್ತರಿಂದ ಉತ್ತಮ ನೆರವು ಒದಗುವುದು.

ಕುಂಭ
ಕುಟುಂಬಸ್ಥರಿಂದ ಅಥವಾ ಸ್ನೇಹಿತರಿಂದ ಅಚ್ಚರಿಯೊಂದನ್ನು ಎದುರಿಸುವಿರಿ. ಅದು ನಿಮಗೆ ಖುಷಿ ಕೊಡುವ ಬೆಳವಣಿಗೆ. ಆರ್ಥಿಕ ಅಭಿವೃದ್ಧಿ.

ಮೀನ
ನಿಮ್ಮನ್ನು ಆವರಿಸಿಕೊಂಡ ವಿವಾದವೊಂದು ಶಮನವಾಗುವುದು. ಮಿತ್ರರು, ಕುಟುಂಬಸ್ಥರು ಬೆಂಬಲಕ್ಕೆ ನಿಲ್ಲುವರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!