ಸ್ವಾತಂತ್ರ್ಯ ಹೋರಾಟ ಬೆಂಬಲಿಸುವ ಕರಪತ್ರ ಹಂಚಿದ್ದಕ್ಕೆ ಎರಡು ವರ್ಷ ಜೈಲು ಸೇರಿದ್ದ ಮುಲ್ಲಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹಸನ್ ಕೋಯಾ ಮುಲ್ಲಾ ಅವರು 1865 ರಲ್ಲಿ ಕೇರಳದ ಕೋಯಿಕ್ಕೋಡ್‌ನ ಎಲತ್ತೂರಿನ ಪಲ್ಲಿವೀಟಿಲ್‌ ಗ್ರಾಮದಲ್ಲಿ ಮೂಸಕುಟ್ಟಿ ಹಾಜಿಯವರ ಮಗನಾಗಿ ಜನಿಸಿದರು.
ಅವರು ಕಾಂಗ್ರೆಸ್ ಖಿಲಾಫತ್ ಸಂಘಟನೆಯ ಸಕ್ರಿಯ ಸದಸ್ಯರಾದರು. ಖಾನ್ ಬಹದ್ದೂರ್ ಮುತ್ತುಕೋಯ ಅವರ ನೇತೃತ್ವದಲ್ಲಿ 1919 ರಲ್ಲಿ ಕೋಝಿಕ್ಕೋಡ್‌ನಲ್ಲಿ ನಡೆದ ಮುಸ್ಲಿಂ ಸಮ್ಮೇಳನದ ಮುಖ್ಯ ಸಂಘಟಕರಲ್ಲಿ ಒಬ್ಬರು. ಮುಲ್ಲಾ ಅವರು ಏಪ್ರಿಲ್ 23, 1921 ರಂದು ಒಟ್ಟಪಾಲಂನಲ್ಲಿ ನಡೆದ ಐತಿಹಾಸಿಕ ಕಾಂಗ್ರೆಸ್ ಖಿಲಾಫತ್ ಸಮ್ಮೇಳನದಲ್ಲಿ ಭಾಗವಹಿಸಿದರು. ಮುಲ್ಲಾ 1921 ರ ಖಿಲಾಫತ್ ಚಳುವಳಿ ವೇಳೆ ಸ್ವಾತಂತ್ರ್ಯ ಹೋರಾಟವನ್ನು ಬೆಂಬಲಿಸುವ ಕರಪತ್ರಗಳನ್ನು ಹಂಚಿದ್ದಕ್ಕಾಗಿ ಸೆಕ್ಷನ್ 124 ಮತ್ತು 153 ರ ಅಡಿಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿದ್ದ “ಅಲ್ – ಅಮೀನ್” ಪತ್ರಿಕೆಯ ನಿರ್ದೇಶಕರಾಗಿಯೂ ಕೆಲಸ ಮಾಡಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!