ದಿನಭವಿಷ್ಯ | ವೈಯಕ್ತಿಕ ಬದುಕಿನಲ್ಲಿ ಸಂತೋಷ, ಕೌಟುಂಬಿಕ ನೆಮ್ಮದಿ ಮರಳುವುದು

ಹೊಸದಿಂತ ಡಿಜಿಟಲ್‌ ಡೆಸ್ಕ್
ಮೇಷ
ಆರ್ಥಿಕ ವಿಷಯ ಆದ್ಯತೆ ಪಡೆಯುತ್ತದೆ. ಅಗತ್ಯ ಕಾರ್ಯಕ್ಕೆ ಹಣದ ಹೊಂದಾಣಿಕೆ ಯಲ್ಲಿ ತೊಡಗುವಿರಿ. ಆದರೆ ಅಡ್ಡಿಗಳು ಎದುರಾಗುತ್ತವೆ.

ವೃಷಭ
ಗಂಭೀರ ವಿಷಯಗಳಲ್ಲಿ  ನೀವು ವ್ಯಸ್ತರಾಗುವಿರಿ. ಸರಿಯಾದ ನಿರ್ಧಾರ ತಾಳದಿದ್ದರೆ ಪ್ರತಿಕೂಲ ಆಗಬಹುದು. ಯೋಚಿಸಿ, ಯೋಜಿಸಿ ಮುನ್ನಡೆಯಿರಿ.

ಮಿಥುನ
ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕು ವುದು. ವೃತ್ತಿಯಲ್ಲಿ ಯಶಸ್ಸು. ವೈಯಕ್ತಿಕ ಬದುಕಿನಲ್ಲಿ ಸಂತೋಷ. ಕೌಟುಂಬಿಕ ನೆಮ್ಮದಿ ಮರಳುವುದು.

ಕಟಕ
ಅತಿಯಾದ ಭಾವುಕತೆ ಒಳ್ಳೆಯದಲ್ಲ. ಅದು ನಿಮಗೆ ಪ್ರತಿಕೂಲಕರವಾಗಿ ಪರಿಣಮಿಸಲಿದೆ. ಕೆಲವು ವಿಷಯ ಅತಿಯಾಗಿ ಹಚ್ಚಿಕೊಳ್ಳದಿರಿ.

ಸಿಂಹ
ವೃತ್ತಿಗಿಂತ ವೈಯಕ್ತಿಕ ವಿಷಯಗಳೇ ಇಂದು ನಿಮಗೆ ಪ್ರಾಮುಖ್ಯತೆ ಪಡೆಯುತ್ತವೆ. ಆಪ್ತರ ವರ್ತನೆ ನಿಮ್ಮ ಭಾವನೆಯ ಏರುಪೇರಿಗೆ ಕಾರಣ.

ಕನ್ಯಾ
ಅಧಿಕ ಕೆಲಸದ ಒತ್ತಡ. ಅಧಿಕ ಖರ್ಚು. ವಿರಾಮವಿಲ್ಲದ ದಿನ. ಇದು ನಿಮ್ಮ ಇಂದಿನ ದಿನಚರಿ. ಕೌಟುಂಬಿಕ ಸದಸ್ಯರು ನಿಮಗೆ ಸಾಂತ್ವನ ನೀಡುವರು.

ತುಲಾ
ನಿಮ್ಮ ಕಾರ್ಯಕ್ಷಮತೆ ಎಲ್ಲರ ಗಮನ ಸೆಳೆಯುವುದು. ಇತರರು ನಿಮ್ಮ ಮಾರ್ಗದರ್ಶನ ಪಡೆಯುತ್ತಾರೆ. ಕೌಟುಂಬಿಕ ಶಾಂತಿ.

ವೃಶ್ಚಿಕ
ಕೆಲವರು ನಿಮ್ಮಿಂದ ಇಂದು ಹೆಚ್ಚು ಖರ್ಚು ಮಾಡಿಸುತ್ತಾರೆ. ಸಾಧ್ಯವಾದಷ್ಟು ಅವರ ಪ್ರಭಾವಕ್ಕೆ ಸಿಲುಕದಿರಿ. ಕೌಟುಂಬಿಕ ಅಸಮಾಧಾನ.

ಧನು
ಯಾವುದೋ ಸಮಸ್ಯೆಯು ಹೆಚ್ಚು ಚಿಂತೆಗೆ ಕಾರಣವಾಗುತ್ತದೆ. ಇತರರ ಸಲಹೆ ಪಡೆದು ಅದಕ್ಕೆ ಪರಿಹಾರ ಕಂಡುಕೊಳ್ಳಿ.

ಮಕರ
ಕಷ್ಟದ ದಿನ. ಇತರರಿಂದ ಅಸಹಕಾರ. ಇಚ್ಛಿಸಿದ ಕಾರ್ಯ ಪೂರ್ಣ ಗೊಳಿಸಲು ಕಷ್ಟ. ವೈಯಕ್ತಿಕವಾಗಿಯೂ ನಿರಾಶೆಯ ದಿನ. ಕಟುಂಬಿಕ ಅಶಾಂತಿ.

ಕುಂಭ
ಆತ್ಮೀಯರ ಒಡನಾಟದಲ್ಲಿ ಕಾಲ ಕಳೆಯುವ ಅವಕಾಶ. ಅವರೊಂದಿಗೆ ಸಣ್ಣ ವಿಷಯಗಳಿಗೆ ಜಗಳವಾದೀತು. ಅದು ನಗಣ್ಯವೆನಿಸುವುದು.

ಮೀನ
ಹೊಣೆಗೇಡಿ ವರ್ತನೆ ನಿಮಗೆ ಹಾನಿ ತರಬಹುದು. ವಿವೇಕದಿಂದ ವರ್ತಿಸಿ. ನೆರೆಕರೆಯವರಿಂದ  ಕಿರುಕುಳ ಅನುಭವಿಸುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!