ಫಿಟ್ ಆಗಿರಲು ಪ್ರತಿದಿನ ಎಷ್ಟು ನಡೆಬೇಕು ಎಂಬ ಪ್ರಶ್ನೆ ನಿಮ್ಮಲ್ಲೂ ಇದೆ ಅಲ್ವಾ?. ಸ್ಮಾರ್ಟ್‌ವಾಚ್ ಮತ್ತು ಮೊಬೈಲ್ ಆ್ಯಪ್‌ಗಳು ಸ್ಟೆಪ್ಸ್ ಕೌಂಟ್ ತೋರಿಸಲು ಆರಂಭಿಸಿದ ನಂತರ, “10,000 ಸ್ಟೆಪ್ಸ್” ಎಂಬ ಸಂಖ್ಯೆ ಬಹಳ ಜನಪ್ರಿಯವಾಗಿದೆ. ಆದರೆ ಎಲ್ಲರಿಗೂ ಅದೇ ಗುರಿ ಅಗತ್ಯವಿಲ್ಲ.
10,000 ಸ್ಟೆಪ್ಸ್ ಮಾತ್ರವೇ ಮಾನದಂಡ ಅಲ್ಲ
ದಿನಕ್ಕೆ 10,000 ಹೆಜ್ಜೆಗಳು ನಡೆದುಬಿಟ್ಟರೆ ಮಾತ್ರ ಫಿಟ್ ಆಗುತ್ತೇವೆ ಎಂಬುದು ಕಡ್ಡಾಯ ನಿಯಮವಲ್ಲ. ನಿಮ್ಮ ವಯಸ್ಸು, ಕೆಲಸದ ರೀತಿ, ಆರೋಗ್ಯ ಮತ್ತು ಫಿಟ್ನೆಸ್ ಗುರಿಯನ್ನು ಅವಲಂಬಿಸಿ ಇದು ಬದಲಾಗುತ್ತದೆ.
ಆರಂಭಕ್ಕೆ 6,000 ರಿಂದ 8,000 ಸಾಕು
ಹೊಸದಾಗಿ ಫಿಟ್ನೆಸ್ ಶುರು ಮಾಡುವವರು ಮೊದಲಿಗೆ 6,000–8,000 ಸ್ಟೆಪ್ಸ್ ಗುರಿ ಇಟ್ಟುಕೊಳ್ಳಬಹುದು. ಇದರಿಂದ ದೇಹ ನಿಧಾನವಾಗಿ ಚಲನೆಗೆ ಹೊಂದಿಕೊಳ್ಳುತ್ತದೆ.
ಇದನ್ನೂ ಓದಿ:
ವೆಯಿಟ್ ಲಾಸ್‌ಗೆ 8,000–10,000 ಉತ್ತಮ
ತೂಕ ಇಳಿಸಿಕೊಳ್ಳಲು ಯತ್ನಿಸುತ್ತಿದ್ದರೆ 8,000 ರಿಂದ 10,000 ಸ್ಟೆಪ್ಸ್ ನಡೆದುದರಿಂದ ಹೆಚ್ಚು ಕ್ಯಾಲೊರಿ ಬರ್ನ್ ಆಗುತ್ತದೆ. ವೇಗವಾಗಿ ನಡೆಯುವುದರಿಂದ ಫಲಿತಾಂಶ ಇನ್ನಷ್ಟು ಉತ್ತಮ.
ನಿರಂತರತೆ ಮುಖ್ಯ
ಒಂದು ದಿನ ಹೆಚ್ಚು ನಡೆದು, ಮುಂದಿನ ದಿನ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವುದಕ್ಕಿಂತ ಪ್ರತಿದಿನ ನಿಯಮಿತವಾಗಿ ನಡೆದು ಹವ್ಯಾಸ ಮಾಡುವುದು ಮುಖ್ಯ.
ಫಿಟ್ನೆಸ್‌ನಲ್ಲಿ ಸಂಖ್ಯೆಗೆ ಮಾತ್ರ ಅಂಟಿಕೊಳ್ಳಬೇಡಿ. ದಿನವೂ ದೇಹವನ್ನು ಚಲನೆಯಲ್ಲಿಡುವುದು ಮತ್ತು ನಿರಂತರವಾಗಿ ನಡೆದುಬರುವುದು ನಿಜವಾದ ಆರೋಗ್ಯ ಮಂತ್ರ.



