February 15, 2026
Sunday, February 15, 2026
spot_img

ದಿನಭವಿಷ್ಯ: ಚಿಂತೆ, ಒತ್ತಡ ಇಲ್ಲದ ನಿರಾಳ ದಿನ, ಹಣದ ಕೊರತೆ ಕಾಡದು

ಮೇಷ
ಚಿಂತೆ, ಒತ್ತಡ ಇಲ್ಲದ ನಿರಾಳ ದಿನ. ಆತ್ಮೀಯರ ಜತೆ ಕಾಲಕ್ಷೇಪ. ಸಾಂಸಾರಿಕ ಉದ್ವಿಗ್ನತೆ ಶಮನ. ಖರ್ಚು ಹೆಚ್ಚುವ ಸನ್ನಿವೇಶ ಉದ್ಭವ.
ವೃಷಭ
ಖಾಸಗಿ ವ್ಯವಹಾರ ದಲ್ಲಿ ಅದೃಷ್ಟ ಕುದುರಲಿದೆ. ಹಣದ ಹೂಡಿಕೆ ಲಾಭ ತರುವುದು.ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾದೀತು. ಸಾಂಸಾರಿಕ ನೆಮ್ಮದಿ.
ಮಿಥುನ
ಪ್ರತಿಯೊಂದು ವಿಚಾರದಲ್ಲಿ ಇಂದು ಎಚ್ಚರದಿಂದಿರಿ. ಪ್ರತಿಕೂಲ ಸನ್ನಿವೇಶ ಎದುರಿಸುವಿರಿ. ಸಂಬಂಧ ಹಾಳಾದೀತು. ವೈಷಮ್ಯ ಹೆಚ್ಚಳ.
ಕಟಕ
ಪ್ರತಿ ಕಾರ್ಯದಲ್ಲಿ ಸಫಲತೆ ಪಡೆಯುವಿರಿ. ವೃತ್ತಿಯಲ್ಲಿ ಉನ್ನತಿ. ಮನೆಯಲ್ಲೂ ಎಲ್ಲರ ಜತೆ ಸಂಬಂಧ ಸುಧಾರಣೆ. ವಿರಸ ಅಂತ್ಯ.
ಸಿಂಹ
ಸಕಾಲದಲ್ಲಿ ಕರ್ತವ್ಯ ಪೂರೈಸಲು ವಿಫಲ. ವ್ಯವಹಾರದಲ್ಲೂ ಸಫಲತೆ ಕಾಣದು. ವಾದಕ್ಕೆ ಇಳಿಯದಿರಿ. ಸಣ್ಣ ಜಗಳ ಗಂಭೀರವಾದೀತು.
ಕನ್ಯಾ
ಕೆಲಸದ ಮೇಲೆ ಹೆಚ್ಚು ಗಮನ ಕೊಡಿ. ಬೇರಾವುದೋ ವಿಚಾರ ನಿಮ್ಮನ್ನು ಬೇರೆ ಚಿಂತೆಗೆ ದೂಡುತ್ತವೆ. ಅನವಶ್ಯ ತಿಕ್ಕಾಟ ಸಂಭವ.
ತುಲಾ
ಕೆಲಸದಲ್ಲಿ ಹೆಚ್ಚುವರಿ ಹೊಣೆ. ಅಧಿಕ ಕೆಲಸ. ವೃತ್ತಿ ಸಂಬಂಧ ಪ್ರಯಾಣ. ಅಡ್ಡಿಗಳ ಹೊರತಾಗಿಯೂ ಆರ್ಥಿಕ ಸಂಪಾದನೆ ಉತ್ತಮಗೊಳ್ಳಲಿದೆ.
ವೃಶ್ಚಿಕ
ಮನೆಯಲ್ಲಿ ಕೆಲಸದ ಒತ್ತಡ. ಯೋಜಿಸಿ ಕಾರ್ಯ ಎಸಗಿ. ಗೊಂದಲ ಹೆಚ್ಚಿಸಿಕೊಳ್ಳಬೇಡಿ. ಅಸಹನೆಯಿಂದ ರೇಗುವ ಪ್ರಸಂಗ ಒದಗೀತು.
ಧನು
ಗ್ರಹಗತಿ ನಿಮಗೆ ಪೂರಕ. ಉತ್ತಮ ವ್ಯವಹಾರದ ಸೂಚನೆ. ಕ್ಷುಲ್ಲಕ ವಿಷಯ ಸಂಬಂಧ ಹಾಳು ಮಾಡದಂತೆ ನೋಡಿಕೊಳ್ಳಿ. ಧನವ್ಯಯ.
ಮಕರ
ವ್ಯವಹಾರದಲ್ಲಿ ಪೂರಕ ಪರಿಸ್ಥಿತಿ. ಕಾರ್ಯ ಸುಗಮ. ಹಣದ ಕೊರತೆ ಕಾಡದು. ಆಪ್ತರ ಜತೆ ಖರೀದಿ ಉತ್ಸಾಹ. ದೈಹಿಕ ಪರಿಸ್ಥಿತಿ ಉತ್ತಮ.
ಕುಂಭ
ಉತ್ಸಾಹದ ದಿನ. ವ್ಯವಹಾರ ಹೊಸ ದಿಕ್ಕು ಹಿಡಿಯಬಹುದು. ಸದುಪಯೋಗ ಮಾಡಿಕೊಳ್ಳಿ. ದಂಪತಿಗೆ ಶುಭ ಬೆಳವಣಿಗೆ.
ಮೀನ
ನಿಮ್ಮ ಕೆಲಸಕ್ಕೆ ಉತ್ತಮ ಪ್ರತಿಫಲ ಲಭ್ಯ. ಆದರೆ ವಿರೋಽಗಳೂ ಹುಟ್ಟಿಕೊಂಡಾರು. ಹೊಟ್ಟೆ ಸಂಬಂಧಿ ಅನಾರೋಗ್ಯ ಕಾಡಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !