October 16, 2026
Friday, October 16, 2026
spot_img

ಸಿದ್ದರಾಮಯ್ಯ 2 ವರ್ಷ ಸಿಎಂ ಅನ್ನೋಕೆ ಪರಮೇಶ್ವರ್ ಯಾರು?: ‘ಕೈ’ ಪಾಳಯದಲ್ಲಿ ಶುರುವಾಯ್ತಾ ಕೋಲ್ಡ್ ವಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಇರುವುದು ನಿಜ, ಆದರೆ ಅವರು ಇವತ್ತೇ ಸಿಎಂ ಆಗುತ್ತಾರೆ ಎಂದು ನಾನು ಹೇಳಿಲ್ಲ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನನ್ನ ಅಣ್ಣ ಸಿಎಂ ಆಗಬೇಕೆಂಬ ಆಸೆ ಇರುವುದು ಸಹಜ. ಆದರೆ ಅಧಿಕಾರ ಬದಲಾವಣೆಯ ಬಗ್ಗೆ ಸಮಯ ಬಂದಾಗ ಮಾತನಾಡೋಣ” ಎನ್ನುವ ಮೂಲಕ ಕುತೂಹಲ ಉಳಿಸಿಕೊಂಡಿದ್ದಾರೆ.

ಮುಂದಿನ ಎರಡು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂಬ ಸಚಿವ ಜಿ. ಪರಮೇಶ್ವರ್ ಹೇಳಿಕೆಗೆ ಡಿ.ಕೆ. ಸುರೇಶ್ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. “ಅವರು ಗೃಹ ಸಚಿವರು, ಅವರಿಗೆ ಎಲ್ಲಾ ವಿಷಯಗಳು ಗೊತ್ತಿರುತ್ತವೆ. ಅವರು ಹೇಳಿದ್ದನ್ನೇ ನಾವು ಕೇಳಬೇಕು” ಎಂದು ಚುಚ್ಚಿದ್ದಾರೆ. ಈ ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವದ ವಿಚಾರವಾಗಿ ಒಳಬೇಗುದಿ ಇರುವುದನ್ನು ಪರೋಕ್ಷವಾಗಿ ಸೂಚಿಸಿದ್ದಾರೆ.

Must Read