ಮೇಷ
ವಿಶ್ವಾಸ ಹೆಚ್ಚಿಸುವ ವಿದ್ಯಮಾನ. ಕಾರ್ಯ ಸಕಾಲದಲ್ಲಿ ಪೂರ್ಣ. ಆರೋಗ್ಯ ಸುಧಾರಣೆ. ಕೌಟುಂಬಿಕ ಸಮಸ್ಯೆ ಶೀಘ್ರ ಇತ್ಯರ್ಥ ಕಾಣಲಿದೆ.
ವೃಷಭ
ಅತಿಮುಖ್ಯ ಕೆಲಸದ ಹೊಣೆ ನಿಮಗೆ ಬೀಳಬಹುದು. ಸರಿಯಾಗಿ ನಿಭಾಯಿಸಿ. ಶಾಪಿಂಗ್‌ನಲ್ಲಿ ಅಽಕ ಕಾಲ ಕಳೆಯದಿರಿ. ಖರ್ಚು ಅಽಕವಾದೀತು.
ಮಿಥುನ
ದಿನದ ಅಂತ್ಯಕ್ಕೆ ಮಹತ್ವದ ಕಾರ್ಯ ಸಾಧಿಸುವಿರಿ. ಆತ್ಮವಿಶ್ವಾಸ ಹೆಚ್ಚಳ. ಹಣದ ಬಗ್ಗೆ ದುರಾಸೆ ಬೇಡ. ಇತರರ ಕೆಲಸ ಮೆಚ್ಚಲು ಕಲಿಯಿರಿ.
ಕಟಕ
ಹಣದ ವಿಚಾರದಲ್ಲಿ ಸಮಸ್ಯೆ ಉಂಟಾದೀತು. ಕೆಲಸದ ಒತ್ತಡದಿಂದ ಅಶಾಂತಿ. ಪ್ರೀತಿಪಾತ್ರರ ಸಂಗದಲ್ಲಿ ಸಮಾಧಾನ ಪಡೆಯುವಿರಿ.
ಸಿಂಹ
ಮನಸ್ಸಿನ ಮೇಲೆ ಹತೋಟಿ ಸಾಽಸಿ. ಎತ್ತೆತ್ತಲೋ ಹರಿಯಲು ಬಿಡಬೇಡಿ. ಆರ್ಥಿಕ ಸಂಕಷ್ಟಕ್ಕೆ ಪರಿಹಾರ ಸಿಗಲಿದೆ. ಧನಾಗಮ.
ಕನ್ಯಾ
ಅಽಕ ಒತ್ತಡದ ದಿನ. ಮಧ್ಯಾಹ್ನದ ವೇಳೆ ಎಲ್ಲ ನಿರಾಳವಾಗಲಿದೆ. ಮನೆಯ ಸಮಸ್ಯೆಗೂ ಪರಿಹಾರ ಸಿಗಲಿದೆ. ಕೌಟುಂಬಿಕ ಸಮಾಧಾನ.
ತುಲಾ
ಅನ್ಯರ ದೂರುತ್ತಾ ಕೂರಬೇಡಿ. ನಿಮ್ಮ ಕರ್ತವ್ಯ ನೆರವೇರಿಸಿ. ಆಪ್ತರ ಜತೆ ಸಂಘರ್ಷ ನಡೆದೀತು. ವೃತ್ತಿ ಒತ್ತಡ ಆರೋಗ್ಯದ ಮೇಲೆ ಪರಿಣಾಮ.
ವೃಶ್ಚಿಕ
ನಿಮ್ಮ ಸುತ್ತ ಉಲ್ಲಾಸದ ವಾತಾವರಣ. ವೃತ್ತಿಯಲ್ಲಿ ಶುಭ ಸುದ್ದಿ. ಮನೆಯಲ್ಲೂ ಸಾಮರಸ್ಯದ ಪರಿಸರ. ಚಿಂತೆ ಮರೆಯುವ ಕಾಲ.
ಧನು
ಕೆಲವಾರು ಬೆಳವಣಿಗೆ ಈ ದಿನ ಸಂಭವಿಸಬಹುದು. ಅದಕ್ಕೆ ಹೊಂದಿಕೊಳ್ಳಲು ಕಲಿಯಿರಿ. ಕುಂಟುನೆಪ ಹೇಳುತ್ತಾ ಕೂರಬೇಡಿ.
ಮಕರ
ನಿಮ್ಮ ಗುರಿ ಸಾಽಸಲು ಸೂಕ್ತ ಕಾಲ. ಆತ್ಮೀಯರ ಜತೆಗಿನ ಭಿನ್ನಮತ ತೊಡೆಯಲು ಗಮನ ಕೊಡಿ. ಅಽಕ ಖರ್ಚು ಚಿಂತೆ ತಂದೀತು.
ಕುಂಭ
ಈ ದಿನ ಹೊಸ ಪ್ರಯೋಗ ನಡೆಸಲು ಹೋಗಬೇಡಿ. ಯಥಾಸ್ಥಿತಿ ಕಾಯ್ದುಕೊಂಡು ಹೋಗಿ. ವ್ಯಕ್ತಿಯೊಬ್ಬರು ಕಿರಿಕಿರಿ ಉಂಟು ಮಾಡಿಯಾರು.
ಮೀನ
ಕಚೇರಿಯ ರಾಜಕೀಯ ನೆಮ್ಮದಿ ಕೆಡಿಸುವುದು. ಸಿಹಿಕಹಿ ಪ್ರಸಂಗಗಳೆರಡೂ ಉಂಟಾದೀತು. ವೆಚ್ಚ ಅಧಿಕಗೊಳ್ಳಬಹುದು.



