ದಿನಭವಿಷ್ಯ: ವಾಹನಗಳ ಬಳಕೆಯಲ್ಲಿ ಎಚ್ಚರ, ಅನಿರೀಕ್ಷಿತ ಅತಿಥಿಯ ಆಗಮನ ಸಾಧ್ಯತೆ

ಮೇಷ
ದಿನವಿಡೀ ಅವಿಶ್ರಾಂತ ಕೆಲಸ. ಕೆಲಸ ಆನಂದಿಸಲು ಕಲಿಯಿರಿ.ಒತ್ತಡ ಕಡಿಮೆಯಾದೀತು. ಆಪ್ತರ ಜತೆ ಸಂವಾದದಿಂದ ಮನೋಲ್ಲಾಸ.
ವೃಷಭ
ಮನಸ್ಸು ಅಸ್ತವ್ಯಸ್ತ. ಕೆಲಸದಲ್ಲಿ ಏಕಾಗ್ರತೆ ಮೂಡದು. ವಿನಯವಂತಿಕೆ ತೋರಿದರೆ  ಇತರರನ್ನು ಸೆಳೆಯಬಹುದು. ವಾಗ್ವಾದದಿಂದ ದೂರವಿರಿ.
ಮಿಥುನ
ಆತ್ಮೀಯ ಬಂಧುತ್ವ ವನ್ನು ಮುಂದಿನ ಸ್ತರಕ್ಕೆ ಒಯ್ಯಲು ಸಕಾಲ. ಹೊಣೆಗಾರಿಕೆ ಹೆಚ್ಚು. ಬಂಧುಗಳಿಂದ ಟೀಕೆ. ಮೈ ನೋವು ಬಾಽಸಬಹುದು.
ಕಟಕ
ಉದಾಸೀನತೆ ಬಿಡಿ. ಅದರಿಂದ ನಿಮ್ಮ ದಿನ ಹಾಳಾದೀತು. ಹೊಟ್ಟೆಯ ಸಮಸ್ಯೆ ಕಾಡಬಹುದು.  ನೀರು, ಆಹಾರ ಸರಿಯಾಗಿ ಸೇವಿಸಿರಿ.
ಸಿಂಹ
ವ್ಯವಹಾರದಲ್ಲಿ ನಿಮಗೆ ಒಳಿತಾಗಲಿದೆ.  ಯಾವುದಾದರೂ ಸಮಸ್ಯೆ ಇದ್ದರೆ ನಿವಾರಣೆ. ಆದರೆ ಸಂಗಾತಿ ಜತೆಗೆ ಭಿನ್ನಾಭಿಪ್ರಾಯ ಸಂಭವ.
ಕನ್ಯಾ
ಕೆಲದಿನಗಳಿಂದ ಕಾಡುತ್ತಿದ್ದ ದೈಹಿಕ ನೋವು ಪರಿಹಾರ ಕಾಣಲಿದೆ. ಪ್ರೀತಿಯ ವಿಷಯದಲ್ಲಿ ಮಹತ್ವದ ಬೆಳವಣಿಗೆ. ಆರ್ಥಿಕ ಒತ್ತಡ ಅಂಕ.
ತುಲಾ
ಹೃದಯದ ಮಾತು ಕೇಳಿ. ಆಗ ಆತ್ಮೀಯರ ಜತೆಗಿನ ಬಿಕ್ಕಟ್ಟು ಪರಿಹರಿಸಬಹುದು.   ಎಲ್ಲವನ್ನು ತರ್ಕದಿಂದ ಅಳೆಯಬೇಡಿ.
ವೃಶ್ಚಿಕ
ಕುಟಂಬಸ್ಥರ ಜತೆ ಸಮಯ ಕಳೆಯಿರಿ. ಅವರಿಗೆ ಭಾವನಾತ್ಮಕ ಬೆಂಬಲದ ಅಗತ್ಯವಿದೆ. ಕೆಲಸದ ಒತ್ತಡದಿಂದ ದೂರವಿರಿ.
ಧನು
ವೃತ್ತಿ ಕ್ಷೇತ್ರದಲ್ಲಿ ನಿಮಗೆ ಪೂರಕ ವಾತಾವರಣ. ಹಳೆಯ ತಪ್ಪು ಸರಿಪಡಿಸಿಕೊಳ್ಳಿ. ಚಾಲನೆಯಲ್ಲಿ ಅತಿವೇಗ, ನಿರ್ಲಕ್ಷ್ಯ ಬೇಡ.
ಮಕರ
ಶಾಂತ ಮನಸ್ಥಿತಿ. ಕೆಲದಿನಗಳ ಒತ್ತಡ ನಿವಾರಣೆ. ಸಣ್ಣ ವಿಷಯದಲ್ಲೂ ಆನಂದ ಕಾಣಲು ಯತ್ನಿಸಿ. ಆರೋಗ್ಯ ಸುಸ್ಥಿರ.
ಕುಂಭ
ಸಂತೋಷ, ದುಃಖ ಬದುಕಿನ ಅವಿಭಾಜ್ಯ ಅಂಗ.ಇಂದು ಅದರ ಅರಿವಾಗಲಿದೆ. ಆಶಾವಾದ ಬಿಡದಿರಿ. ರಸ್ತೆ ಬದಿ ತಿಂಡಿಯಿದ ದೂರವಿರಿ.
ಮೀನ
ನಿಮಗೆ ಉಂಟಾಗಿದ್ದ ವಿಘ್ನಗಳು ಪರಿಹಾರ ಕಾಣುವವು. ಆದರೂ ಮನಸ್ಸು  ಶಾಂತಿ ಕಾಣದು. ಹಲವಾರು ವಿಚಾರಗಳ ತಾಕಲಾಟ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!