April 12, 2026
Sunday, April 12, 2026
spot_img

ದಿನಭವಿಷ್ಯ: ಭಾವನೆಗಳ ಮೇಲೆ ಹತೋಟಿ ಇರಲಿ, ಆಲಸ್ಯ ಬಿಟ್ಟು ಕೆಲಸ ಮಾಡಿದರೆ ಗೆಲುವು ನಿಮ್ಮದೇ

ಮೇಷ
ವೃತ್ತಿ ಕೌಶಲ ಸುಧಾರಣೆಗೆ ಪ್ರೇರಣೆ ಸಿಗಲಿದೆ. ಸಹೋದ್ಯೋಗಿ ಜತೆ ಹೊಂದಾಣಿಕೆ ಮುಖ್ಯ. ಬದಲಾವಣೆ ವಿರೋಧಿಸಬೇಡಿ.                
ವೃಷಭ
ಸಂಗಾತಿಯ ಅಭಿಪ್ರಾಯಕ್ಕೆ ಮನ್ನಣೆ ಕೊಡಿ. ಅದರಿಂದ ವಿವಾದ ಅಂತ್ಯ. ವೃತ್ತಿಯಲ್ಲಿ ಹಿರಿಯರ ಸಹಕಾರ. ಆರ್ಥಿಕ ಒತ್ತಡ ಅಂತ್ಯ.          
ಮಿಥುನ
 ಭಾವನಾತ್ಮಕ ಏರುಪೇರು. ಸಂಬಂಧ ದಲ್ಲಿ ಒಡಕು. ಗ್ರಹಗತಿ ಅಷ್ಟೇನೂ ಪೂರಕವಾಗಿಲ್ಲ. ಮುಖ್ಯ ಕಾರ್ಯಕ್ಕೆ ತುಸು ಕಾಲ ಕಾಯುವುದೊಳಿತು.        
ಕಟಕ
ವೃತ್ತಿಯಲ್ಲೂ ವೈಯಕ್ತಿಕವಾಗಿಯೂ ಸಂಕಷ್ಟ ಎದುರಿಸುವಿರಿ. ಪರಿಸ್ಥಿತಿ ನಿಮಗೆ ಪ್ರತಿಕೂಲ. ಇಷ್ಟದೇವರ ಪ್ರಾರ್ಥನೆ ಮಾಡಿ.  
ಸಿಂಹ
ಉತ್ಸಾಹದ ದಿನ. ಕಾರ್ಯ ಸಂಪೂರ್ಣ. ಭಿನ್ನಮತ ನಿವಾರಣೆ. ಜಡತ್ವ ಬಿಟ್ಟು ಕೆಲಸ ಮಾಡಿ. ಆರೋಗ್ಯ ಸಮಸ್ಯೆ ಪರಿಹಾರ.    
ಕನ್ಯಾ
ನಿಮ್ಮ ತಪ್ಪಿಗೆ ಸಂಗಾತಿಯ ಮೇಲೆ ದೂರು ಹಾಕಬೇಡಿ. ವೃತ್ತಿ ಸಮಸ್ಯೆ ನೀವು ತಿಳಿದು ಕೊಂಡಷ್ಟು  ಕಠಿಣವಾಗಿಲ್ಲ. ಪರಿಹಾರ ಸಾಧ್ಯವಿದೆ.  
ತುಲಾ
ಅಶಾಂತ ಮನಸ್ಸು. ನಿಮ್ಮ ಚಿಂತನೆಗಳು ಕಾರ್ಯರೂಪಕ್ಕೆ ಬರದಿರುವ ಚಿಂತೆ. ಅಧ್ಯಾತ್ಮ, ಧ್ಯಾನ ನಿಮಗೆ ಸಹಕಾರಿಯಾದೀತು.      
ವೃಶ್ಚಿಕ
ಮನೆಯವರ ಜತೆ  ಪ್ರೀತಿಯಿಂದ ನಡಕೊಳ್ಳಿ. ಅಽಕಾರ ಚಲಾವಣೆ ಒಳಿತು ತರದು. ಮುನಿಸು ನಿವಾರಣೆಗೆ ಗಮನ ಕೊಡಿ. ವೆಚ್ಚ ಅಽಕ.    
ಧನು
ಆರ್ಥಿಕ ಪರಿಸ್ಥಿತಿ ಸುಧಾರಣೆ. ಕಾಡುತ್ತಿದ್ದ ಚಿಂತೆ ಪರಿಹಾರದ ಲಕ್ಷಣ ತೋರಿಬರುತ್ತಿದೆ. ಕೋಪತಾಪ ನಿಯಂತ್ರಿಸಿ. ಸಮಾಧಾನಚಿತ್ತರಾಗಿರಿ.  
ಮಕರ
 ನಿಮ್ಮ ಅಸಹನೆಗೆ  ಇತರರ ಮೇಲೆ ರೇಗುವಿರಿ. ಸಂಘರ್ಷದ ಮನೋಭಾವ ಬಿಡಿ. ಇತರರ ಮನಸ್ಥಿತಿ ಅರಿತು  ವ್ಯವಹರಿಸಿ.      
ಕುಂಭ
ಗ್ರಹಗತಿ ಪೂರಕ. ಸಂಬಂಧದಲ್ಲಿ ಸುಧಾರಣೆ. ಮಾನಸಿಕ ನಿರಾಳತೆ. ಹಣದ ಬಿಕ್ಕಟ್ಟು ಪರಿಹಾರ. ಹಳೆಯ ಸ್ನೇಹಿತರ ಭೇಟಿ. ಇಷ್ಟದ ವಸ್ತು ಖರೀದಿ.            
ಮೀನ
ನಿಮ್ಮ ಸುತ್ತಲಿನ ಬದಲಾವಣೆಗೆ ಹೊಂದಿಕೊಳ್ಳಿ. ದೂರವಾಗಿ ನಿಲ್ಲಬೇಡಿ. ಸಣ್ಣ ವಿಷಯಕ್ಕೆ ಅಸಹನೆಯಿಂದ ರೇಗದಿರಿ. ಶಾಂತಚಿತ್ತತೆ ಮುಖ್ಯ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !