July 18, 2026
Saturday, July 18, 2026
spot_img

ದಿನಭವಿಷ್ಯ: ಹಣದ ವಿಚಾರದಲ್ಲಿ ರಿಸ್ಕ್ ಬೇಡ, ಕಾಟಾಚಾರದ ಕೆಲಸ ಮಾಡಬೇಡಿ

ಮೇಷ
ಇಂದು ಶುರು ಮಾಡುವ ಕೆಲಸದಲ್ಲಿ ಸಫಲತೆ ಖಚಿತ. ಎಲ್ಲರ ಜತೆ ಸೌಹಾರ್ದ ಸಂಬಂಧ ಕಾಯ್ದುಕೊಳ್ಳಿ. ಮಕ್ಕಳ ಒಡನಾಟದಲ್ಲಿ ಖುಷಿ.

ವೃಷಭ
ಎಲ್ಲರ ಮೆಚ್ಚುಗೆ ಪಡೆಯುವ ನಿರ್ವಹಣೆ. ಹಣದ ವಿಚಾರದಲ್ಲಿ ರಿಸ್ಕ್ ಬೇಡ. ಎಚ್ಚರಿಕೆಯ ಹೆಜ್ಜೆ ಇಡುವುದೊಳಿತು. ಕೌಟುಂಬಿಕ ಕಲಹ.

ಮಿಥುನ
ಋಣಾತ್ಮಕ ಚಿಂತನೆ ಹರಡುವವರ ಪ್ರಭಾವಕ್ಕೆ ಸಿಲುಕಬೇಡಿ. ನಿಮ್ಮ ಅಂತಃಪ್ರಜ್ಞೆಗೆ ಕಿವಿಗೊಡಿ. ಉತ್ತಮ ಫಲವನ್ನು ಪಡೆಯುವಿರಿ.

ಕಟಕ
ಸಂಬಂಧದಲ್ಲಿ ದೊಡ್ಡ ತಿರುವು ಉಂಟಾದೀತು. ವಿವಾಹ ಸಂಬಂಧ ಒದಗಬಹುದು. ವದಂತಿಗೆ ಕಿವಿಗೊಡಬೇಡಿ. ಆರ್ಥಿಕ ಪರಿಸ್ಥಿತಿ ಸುಧಾರಣೆ.

ಸಿಂಹ
ವೈರುಧ್ಯಮಯ ಭಾವನೆಗಳ ತಾಕಲಾಟ. ಹೊಣೆಗಾರಿಕೆ ಹೆಚ್ಚಳ. ಸಹಕಾರ ಕಡಿಮೆ. ತಾಳ್ಮೆಯಿಂದ ಕಾಯಿರಿ. ಒಳ್ಳೆದಿನ ಬರಲಿದೆ.

ಕನ್ಯಾ
ಅನಿರೀಕ್ಷಿತ ಕಾರ್ಯದೊತ್ತಡ. ಆದರೂ ಸರಿಯಾಗಿ ನಿಭಾಯಿಸುವಿರಿ. ಆರ್ಥಿಕ ಲಾಭ. ಚರ್ಮದ ಅಲರ್ಜಿ ಕಾಡಬಹುದು.

ತುಲಾ
ಕಳೆದ ಕೆಲದಿನಗಳ ಸಮಸ್ಯೆ, ಗೊಂದಲ ಇಂದು ಇತ್ಯರ್ಥ. ನಿಶ್ಚಿತ ನಿರ್ಧಾರಕ್ಕೆ ಬರುವಿರಿ. ಸಂಕಷ್ಟಗಳು ಪರಿಹಾರ. ಸಂಬಂಧ ಸುಧಾರಣೆ.

ವೃಶ್ಚಿಕ
ಎಲ್ಲವೂ ನಿಮಗೆ ಪೂರಕವಾಗಿ ಸಾಗುತ್ತಿಲ್ಲ ಎಂಬ ಬೇಸರ. ನಿಮ್ಮ ಕಾರ್ಯಶೈಲಿಯಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಿ. ಇಷ್ಟದೇವರ ಪ್ರಾರ್ಥಿಸಿ.

ಧನು
ಇಂದು ಗಂಭೀರ ಮನಸ್ಥಿತಿ ತೋರುವಿರಿ. ಲಘು ಧೋರಣೆ ತೊರೆಯುವಿರಿ. ಇದು ನಿಮಗೆ ಒಳಿತನ್ನೇ ತರಲಿದೆ. ಆರ್ಥಿಕ ದೃಢತೆ.

ಮಕರ
ಕೆಲಸದಲ್ಲಿ ಬದ್ಧತೆ ಇರಲಿ. ಕಾಟಾಚಾರದ ಕೆಲಸ ಮಾಡಬೇಡಿ. ಹಿರಿಯರ ಕಿವಿಮಾತು ಗಂಭೀರವಾಗಿ ಪರಿಗಣಿಸಿ. ಸಂಬಂಧದಲ್ಲಿ ಒಡಕು.

ಕುಂಭ
ಪ್ರೀತಿಯಲ್ಲಿ ಅಪಯಶಸ್ಸು. ಹಳೆಯ ಅನುಭವ ಕಹಿಯಾಗಿ ಕಾಡಲಿದೆ. ಮಾನಸಿಕ ಉದ್ವಿಗ್ನತೆ. ಬಂಧುಗಳ ಅಸಹಕಾರ.

ಮೀನ
ಆತ್ಮೀಯರ ಬೆಂಬಲದಿಂದ ನಿಮ್ಮ ಕಾರ್ಯ ಸುಗಮ. ಕಾಡುವ ಒತ್ತಡಕ್ಕೆ ಶೀಘ್ರ ಪರಿಹಾರ ಸಿಗಲಿದೆ. ಆರ್ಥಿಕ ಹಿನ್ನಡೆ ಸಂಭವ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !