ದಿನಭವಿಷ್ಯ: ಅನಿರೀಕ್ಷಿತ ವೆಚ್ಚ, ಏನು ಸಿಗಬೇಕೋ ಅದು ಸರಿಯಾದ ಸಮಯಕ್ಕೆ ಸಿಗಲಿದೆ ಚಿಂತಿಸಬೇಡಿ

ಮೇಷ
ಹಣದ ಚಿಂತೆ ಸದ್ಯಕ್ಕೆ ಬದಿಗಿಡಿ. ಅದಕ್ಕಿಂತ ಮುಖ್ಯ ವಿಷಯಕ್ಕೆ ಗಮನ ಕೊಡಿ. ನಾನು ಅನ್ಯರಿಗಿಂತ ಭಿನ್ನ ಎಂಬ ಅಹಂ ಬಿಡಿ. ಹೊಂದಾಣಿಕೆಯಿರಲಿ.
ವೃಷಭ
ಈ ದಿನ ಹೆಚ್ಚು ಬಲ ನೀಡದು. ಕ್ಲಿಷ್ಟಕರ ಪರಿಸ್ಥಿತಿ ಎದುರಿಸುವಿರಿ. ಮನದ ಗೊಂದಲ ಮೊದಲು ನಿವಾರಿಸಿಕೊಳ್ಳಿ.  ಬಳಿಕ ಪರಿಹಾರ ಕಂಡುಹುಡುಕಿ.
ಮಿಥುನ
ಹೊರಪ್ರಪಂಚದ ಪರಿಚಯ ಮಾಡಿಕೊಳ್ಳಿ. ಬಾವಿಯೊಳಗಿನ ಕಪ್ಪೆ ಆಗದಿರಿ. ಇತರರ ಜತೆ ಬೆರೆಯುವುದರಿಂದ ಹಿತವಿದೆ.
ಕಟಕ
ಹೆಚ್ಚಿನ ವಿಶೇಷ ಘಟಿಸದ ಸಾಧಾರಣ ದಿನ. ಪ್ರಯಾಣದ ಸಂಭವ ಇದೆ. ಕೆಲವರಿಗೆ ಅನಾರೋಗ್ಯ ಕಾಡಬಹುದು. ಅನಿರೀಕ್ಷಿತ ಧನಲಾಭ.
ಸಿಂಹ
ಒತ್ತಡ ಮತ್ತು ಬಳಲಿಕೆಯ ದಿನ. ಯಾವುದರಲ್ಲೂ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳದಿರಿ. ಅದರಿಂದ ನಿರಾಶೆ ಪಡುವಿರಿ.
ಕನ್ಯಾ
ನಿಮ್ಮ ಚರ್ಯೆಯಲ್ಲಿ ಬದಲಾವಣೆಗೆ ಈ ದಿನ ಕಾರಣವಾದೀತು.  ಗಮನಾರ್ಹ ಬೆಳವಣಿಗೆ ಸಂಭವಿಸಲಿದೆ. ಕೆಲವರ ಪ್ರಭಾವ ಉಂಟಾಗಲಿದೆ.
ತುಲಾ
ಕ್ಲಿಷ್ಟಕರ ಪರಿಸ್ಥಿತಿ ಎದುರಿಸುವಿರಿ. ಅಮೂಲ್ಯ ವಸ್ತುಗಳ ಮೇಲೆ ಹೆಚ್ಚಿನ ನಿಗಾ ಇಡಿ. ಖರ್ಚಿನ ಮೇಲೆ ಹಿಡಿತವಿರಲಿ. ಅಜೀರ್ಣತೆ ಕಾಡೀತು.
ವೃಶ್ಚಿಕ
ನಿಮ್ಮ ಸಮಸ್ಯೆಯ ಮುಕ್ತ ವಿಶ್ಲೇಷಣೆ ನಡೆಸಿ. ಬಳಿಕ ಅದಕ್ಕೆ ಪರಿಹಾರ ಹುಡುಕುವುದು ಸುಲಭ. ಬಲ್ಲವರ ಸಲಹೆ ಪಡೆಯಿರಿ.
ಧನು
ಈ ದಿನ ನಿರಾಳವಾಗಿ ಕಳೆಯುವುದು ನಿಮ್ಮ ಉದ್ದೇಶ. ಆದರೆ ಗ್ರಹಗತಿ ಅದಕ್ಕೆ ಅವಕಾಶ ನೀಡದು. ಏನಾದರೊಂದು ಒತ್ತಡ ದಿನವಿಡೀ ಕಾಡುವುದು.
ಮಕರ
ವ್ಯವಹಾರದಲ್ಲಿ ಸಾಧಾರಣ ಪ್ರಗತಿ.  ಹಾಗಾಗಿ ಅಸಂತೃಪ್ತಿ ಕಾಡಲಿದೆ. ವಿದ್ಯಾರ್ಥಿಗಳು ಅಧ್ಯಯನಕ್ಕೆ ಗಂಭೀರ ಗಮನ ಕೊಡಬೇಕು.
ಕುಂಭ
ಈ ದಿನ ನಿರಾಳತೆ, ನಿಶ್ಚಿಂತೆಯಿಂದ ಸಾಗಲಿದೆ. ಹೆಚ್ಚಿನ ಒತ್ತಡ ಬಾಧಿಸದು. ಹರಿತ ವಸ್ತುಗಳ ಜತೆಗೆ ಕಾರ್ಯ ಎಸಗುವಾಗ ಎಚ್ಚರವಿರಿ.
ಮೀನ
ಫಲಪ್ರದ ದಿನವಲ್ಲ. ನಿರಾಶೆ, ಬೇಸರ ಕಾಡಲಿದೆ. ಇತರರ ಜತೆ ಮಾತುಕತೆ ವಾಗ್ವಾದಕ್ಕೆ ತಿರುಗೀತು. ಸಹನೆ ಕಾಪಾಡಿ. ಧನಹಾನಿ ಉಂಟಾದೀತು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!