October 5, 2026
Monday, October 5, 2026
spot_img

ದಿನಭವಿಷ್ಯ: ಸಮಸ್ಯೆಯನ್ನು ನೇರವಾಗಿ ಎದುರಿಸಿ, ಹಣದ ಪರಿಸ್ಥಿತಿ ಉತ್ತಮ

ಮೇಷ
ಸಮಸ್ಯೆಯನ್ನು ನೇರವಾಗಿ ಎದುರಿಸಿ. ಸುತ್ತುಬಳಸಿನ ದಾರಿ ಬೇಡ. ದಾಂಪತ್ಯ ಸೌಹಾರ್ದ. ಏಕಾಂಗಿಗಳಿಗೆ ಸಂಗಾತಿ ಸಿಗುವರು.
ವೃಷಭ
ಉದ್ದೇಶ ಸಾಧನೆಗೆ ಸತತ ಪ್ರಯತ್ನ ಬೇಕು. ಸ್ವಲ್ಪ ಮಟ್ಟಿನ ವೈಫಲ್ಯ ಸಂಭವ. ಹಣದ ಪರಿಸ್ಥಿತಿ ಉತ್ತಮ. ಹಿರಿಯರಿಗೆ ಸ್ವಾಸ್ಥ್ಯ ಸಮಸ್ಯೆ ಉಂಟಾದೀತು.
ಮಿಥುನ
ಕ್ರಿಯಾಶೀಲ ಚಟುವಟಿಕೆಗೆ ಬೆಂಬಲ ಸಿಗಲಿದೆ. ಉದ್ಯಮಿಗಳಿಗೆ ಉತ್ತಮ ವ್ಯವಹಾರ. ಸಂಗಾತಿ ಜತೆಗಿನ ಮುನಿಸು ಅಂತ್ಯ.
ಕಟಕ
ವೃತ್ತಿಯಲ್ಲಿ ಉನ್ನತಿ. ಉತ್ತಮ ಅವಕಾಶ. ಎಲ್ಲರ ಜತೆ ಉತ್ತಮ ಹೊಂದಾಣಿಕೆ. ಆರ್ಥಿಕ ಪರಿಸ್ಥಿತಿ ಸಮಾಧಾನಕರ. ಆಪ್ತ ಬಂಧುವಿನ ಭೇಟಿ.
ಸಿಂಹ
ವೃತ್ತಿಕ್ಷೇತ್ರದಲ್ಲಿ ಅದೃಷ್ಟ. ನಿಮ್ಮ ಕಾರ್ಯಕ್ಕೆ ಶ್ಲಾಘನೆ. ಹಣದ ಹರಿವು ಹೆಚ್ಚಳ. ಮನೆಯಲ್ಲಿ ಸೌಹಾರ್ದ ವಾತಾವರಣ. ತೃಪ್ತಿಕರ ದಿನವಿದು.
ಕನ್ಯಾ
ಉತ್ಸಾಹಪೂರ್ಣ ದಿನ. ಮನಸ್ಸು ಉಲ್ಲಸಿತ ಗೊಳಿಸುವ ಬೆಳವಣಿಗೆ. ನಿಮ್ಮ ಪ್ರಸ್ತಾಪಕ್ಕೆ ಅಂಗೀಕಾರ ಸಿಗಲಿದೆ. ಆರೋಗ್ಯ ಸುಸ್ಥಿರ.
ತುಲಾ
ಅಧಿಕ ಹೊಣೆ. ಅಧಿಕ ಕೆಲಸ. ಪ್ರಮುಖ ನಿರ್ಧಾರ ತಾಳಲು ನಿಮ್ಮನ್ನೆ ಎಲ್ಲರು ಅವಲಂಬಿಸುವರು. ಸಂಬಂಧ ವೃದ್ಧಿ. ಸ್ವಾಸ್ಥ್ಯ ಕಾಳಜಿ ವಹಿಸಿ.
ವೃಶ್ಚಿಕ
ಆರಾಮವಾಗಿ ನಿಮ್ಮ ಕಾರ್ಯ ಮುಗಿಸಲು ಸಾಕಷ್ಟು ಸಮಯ ಸಿಗಲಿದೆ. ಧಾವಂತ ಇಲ್ಲ. ಮಾತು ತಪ್ಪಿ ಆಡದಿರಿ. ಸೌಹಾರ್ದ ಕೆಡಿಸೀತು.
ಧನು
ಕಠಿಣ ಪರಿಶ್ರಮದ ಬಳಿಕವಷ್ಟೆ ಯಶಸ್ಸು ಸಿಗಲಿದೆ. ಹಾಗಾಗಿ ಉದಾಸೀನತೆ ತೋರದಿರಿ. ಉಷ್ಣಸಂಬಂಧ ಅಸ್ವಸ್ಥತೆ ಕಾಡಬಹುದು.
ಮಕರ
ವ್ಯವಹಾರದಲ್ಲಿ ಅತಿಯಾದ ಒತ್ತಡ. ಕೌಟುಂಬಿಕ ಸಂಬಂಧ ಹದಗೆಡಬಹುದು. ಅನಾರೋಗ್ಯಕರ ಆಹಾರ ಸೇವಿಸದಿರಿ.
ಕುಂಭ
ಆತ್ಮೀಯರ ಜತೆ ಸಂವಹನ ಕೊರತೆ ಉಂಟಾದೀತು. ಸಾಲ ಪಡೆಯುವ ಸಂದರ್ಭ ಒದಗಬಹುದು. ಖಾರ ಆಹಾರ ದೂರವಿಡಿ.
ಮೀನ
ಬದುಕಿನಲ್ಲಿ ಮಹತ್ವದ ಬದಲಾವಣೆ ಉಂಟಾದೀತು. ಉಳಿತಾಯ ಹೆಚ್ಚಳ. ವಿರೋಧಿಗಳ ಮನ ಗೆಲ್ಲಲು ಸಫಲರಾಗುವಿರಿ.

Must Read