June 3, 2026
Wednesday, June 3, 2026
spot_img

ದಿನಭವಿಷ್ಯ: ಮನೆಯಲ್ಲಿ ಹರುಷದ ವಾತಾವರಣ, ವಿದ್ಯಾರ್ಥಿಗಳಿಗೆ ಇಂದು ಅತ್ಯಂತ ಶುಭ ದಿನ

ಮೇಷ
ವೃತ್ತಿ ಸಮಸ್ಯೆ ಇತ್ಯರ್ಥ. ನವ ವಿವಾಹಿತರಿಗೆ ಹರ್ಷದ ಸುದ್ದಿ.  ಉನ್ನತ ಶಿಕ್ಷಣ ಬಯಸುವ ವಿದ್ಯಾರ್ಥಿ ಗಳಿಗೆ ಶುಭ ದಿನ.
ವೃಷಭ
  ನಿಮ್ಮನ್ನು ಉತ್ತೇಜಿಸುವ ವ್ಯಕ್ತಿ ಸಿಗುವರು. ಪರಿಸ್ಥಿತಿಗೆ ಹೊಂದಿಕೊಂಡು ಬಾಳಿ, ಅದನ್ನು ಬದಲಿಸಲು  ಹೋಗಬೇಡಿ.                
ಮಿಥುನ
ವೃತ್ತಿಕ್ಷೇತ್ರದಲ್ಲಿ ಅಽಕಾರ ಪೈಪೋಟಿ ನಡೆದೀತು. ಸಹನೆಯಿಂದ ನಿಭಾಯಿಸಿ. ಹಳೆಯ ತಪ್ಪು ನಿಮ್ಮನ್ನು ಕಾಡಲು ಅವಕಾಶ ನೀಡಬೇಡಿ.          
ಕಟಕ
ಮನಸ್ಸು ಪ್ರಕ್ಷುಬ್ಧ. ಧ್ಯಾನ ನಿಮಗೆ ಸಹಕಾರಿ. ಆರೋಗ್ಯದ ಕಡೆ ಗಮನ ಕೊಡಿ. ವಿದ್ಯಾರ್ಥಿಗಳಿಗೆ ಗ್ರಹಗತಿ ಅನುಕೂಲಕರ. ಉನ್ನತ ಶಿಕ್ಷಣ ಪ್ರಾಪ್ತಿ.                          
ಸಿಂಹ
ಹೆತ್ತವರು ಮಕ್ಕಳ ಕಡೆ ಹೆಚ್ಚು ಗಮನ ಕೊಡಿ. ಋತುಮಾನ ಸಂಬಂಽ ಅನಾರೋಗ್ಯ ಸಂಭವ. ನಿಮ್ಮ ವ್ಯವಹಾರ ಸಕಾಲದಲ್ಲಿ ಮುಗಿಸಿ.              
ಕನ್ಯಾ
ಜಡ ಸ್ವಭಾವ ಬಿಡಿ. ಉತ್ಸಾಹ ತುಂಬಿಕೊಳ್ಳಿ. ಆಪ್ತರ ಸಂಗದಲ್ಲಿ ಖುಷಿ ಪಡುವ ಬೆಳವಣಿಗೆ. ಆರ್ಥಿಕ ಬಿಕ್ಕಟ್ಟು ಇತ್ಯರ್ಥ.                  ಕೌಟುಂಬಿಕ ಸಾಮರಸ್ಯ.
ತುಲಾ
 ನಿಮ್ಮ ಜತೆ ಇರುವವರೆಲ್ಲ ನಿಮ್ಮ ಹಿತೈಷಿಗಳಲ್ಲ, ಅರಿಯಿರಿ. ಹಿರಿಯರ ಜತೆ ತುಸು ಕಾಲ ಕಳೆಯಿರಿ. ಆರ್ಥಿಕ ವ್ಯವಹಾರ ಸುಗಮ.                              
ವೃಶ್ಚಿಕ
ಇಂದು ಹೆಚ್ಚು ಉತ್ಸಾಹ, ಕ್ರಿಯಾಶೀಲತೆ. ಅದನ್ನು ಸದುಪಯೋಗ ಮಾಡಿಕೊಳ್ಳಿ.  ವೃತ್ತಿಯಲ್ಲಿ ಮೂಡಿದ್ದ ಬಿಕ್ಕಟ್ಟು ಪರಿಹಾರ ಸನ್ನಿಹಿತ.
ಧನು
  ಕಾರ್ಯಕ್ಷಮತೆ ಎಲ್ಲರ ಮೆಚ್ಚುಗೆ ಪಡೆಯಲಿದೆ. ನಿಮ್ಮಿಂದ ಕೆಲವರು ಹೆಚ್ಚು ಹಣ ಖರ್ಚು ಮಾಡಿಸುವರು. ಆ ಬಗ್ಗೆ ಎಚ್ಚರದಿಂದಿರಿ.  
ಮಕರ
ಕೆಲ ಸಮಯದಿಂದ ಕಾಡುತ್ತಿದ್ದ ಸಂಽ ನೋವು ನಿವಾರಣೆ. ಆರ್ಥಿಕ ಯೋಜನೆಗೆ ಉತ್ತೇಜನ ಸಿಗಲಿದೆ. ಪ್ರಮುಖ ಗುರಿ ಈಡೇರುವ ಸಾಧ್ಯತೆ.        
ಕುಂಭ
 ಕನಸು ಕಂಡರಷ್ಟೆ ಸಾಲದು. ಅದಕ್ಕೆ ತಕ್ಕ ಶ್ರಮವೂ ಬೇಕು. ಕೌಟುಂಬಿಕ ಪರಿಸರ ಉಲ್ಲಾಸದಾಯಕ. ವೃತ್ತಿಯಲ್ಲಿ ಯಶಸ್ಸು.              
 ಮೀನ
 ಗ್ರಹಗತಿ ನಿಮಗೆ ಪೂರಕ. ಸಂಬಂಧದಲ್ಲಿ ಸುಧಾರಣೆ. ಮಾನಸಿಕ ಶಾಂತಿ. ಆರ್ಥಿಕ ಸಂಕಷ್ಟ ಪರಿಹಾರ. ಉದ್ದೇಶ ವೊಂದು ಈಡೇರಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !